ಸ್ನೇಹಿತರ ಜೊತೆಗೆ ಟ್ರಕ್ಕಿಂಗ್ ಗೆ ತೆರಳಿದ್ದ ಯುವಕ ಏಕಾಏಕಿ ನಾಪತ್ತೆ: ಕಾಡಿನ ಮಧ್ಯೆ ಒಬ್ಬನೇ ನಿಂತಿದ್ದ ಯುವಕ! - Mahanayaka

ಸ್ನೇಹಿತರ ಜೊತೆಗೆ ಟ್ರಕ್ಕಿಂಗ್ ಗೆ ತೆರಳಿದ್ದ ಯುವಕ ಏಕಾಏಕಿ ನಾಪತ್ತೆ: ಕಾಡಿನ ಮಧ್ಯೆ ಒಬ್ಬನೇ ನಿಂತಿದ್ದ ಯುವಕ!

trekking
26/02/2024

ಚಿಕ್ಕಮಗಳೂರು: ಚಾರಣಕ್ಕೆ ಬಂದಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಬಲ್ಲಾಳ ರಾಯ ದುರ್ಗದಲ್ಲಿ ನಡೆದಿದ್ದು,  ಪೊಲೀಸರು ಹಾಗೂ ಸ್ಥಳೀಯರ ಸಹಾಯದೊಂದಿಗೆ ಕೊನೆಗೂ ಯುವಕನನ್ನು ರಕ್ಷಿಸಿ ಕರೆತರಲಾಗಿದೆ.

ಕೆಎಂಸಿ ಆಸ್ಪತ್ರೆಯಲ್ಲಿ MBBS ಅಭ್ಯಾಸ ಮಾಡುತ್ತಿದ್ದ 10 ಯುವಕರು ಸೇರಿಕೊಂಡು ಬಾಳೂರು ಠಾಣಾ ವ್ಯಾಪ್ತಿಯ ಬಲ್ಲಡ ರಾಯ ದುರ್ಗ ಹಾಗೂ ಭಂಡಾಜೆ ಫಾಲ್ಸ್ ಚಾರಣಕ್ಕೆ ಹೋಗಿದ್ದರು.   ಕಾಡಿನೊಳಗೆ ಸುಮಾರು 8 ಕಿ.ಮೀ. ಕಾಡಿನೊಳಗೆ ಧನುಷ್ ಎಂಬ ಯುವಕ ನಾಪತ್ತೆಯಾಗಿದ್ದನು.  ಆತನ ಮೊಬೈಲ್ ಕೂಡ ಸ್ವಚ್ ಆಫ್ ಆಗಿತ್ತು. ಹೀಗಾಗಿ ಜೊತೆಗಿದ್ದವರು ಸುಂಕ ಸಾಲೆ ಗ್ರಾಮಕ್ಕೆ ಬಂದು 112 ಪೊಲೀಸ್ ವಾಹನಕ್ಕೆ ಕರೆ ಮಾಡಿ ಸಹಾಯ ಕೇಳಿದ್ದರು.

ಧನುಷ್ ನಾಪತ್ತೆಯಾಗಿದ್ದ ಸ್ಥಳವನ್ನು ಗುರಿಯಾಗಿಟ್ಟುಕೊಂಡು ಸುಮಾರು 3 ಗಂಟೆಗಳ ಕಾಲ ನಿರಂತರವಾಗಿ ಹುಡುಕಾಟ ನಡೆಸಿದಾಗ ಗುಡ್ಡದ ಪ್ರದೇಶದಲ್ಲಿ  ಸುಮಾರು 700 ಅಡಿ ಕೆಳಗೆ ದಟ್ಟವಾದ ಅರಣ್ಣ್ಯ ಮಧ್ಯದಲ್ಲಿ ಧನುಷ್ ಒಬ್ಬನೇ ನಿಂತಿರುವುದು ಪತ್ತೆಯಾಗಿದ್ದಾನೆ.

ಕಾಡಿನಲ್ಲಿ ಅಲೆದು ಸುಸ್ತಾಗಿದ್ದ ಧನುಷ್ ಗೆ  ಕುಡಿಯಲು ನೀರು ಕೊಟ್ಟು, ಧೈರ್ಯ ಹೇಳಿ, ಆತನ ಮನೆಯವರ ಜೊತೆಗೆ ಮಾತನಾಡಿಸಿ, ಅವರನ್ನು ಪೊಲೀಸರು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮೆಹಬೂಬ್ ಸಾಧನಿ, ಶಂಕರ್ ಬೋವಿ ಹಾಗೂ ಸ್ಥಳೀಯರು ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ