ಶ್ರವಣ ಸಾಮರ್ಥ್ಯ ಕಳೆದುಕೊಂಡ ಇಯರ್ ಬಡ್ ಬಳಸುತ್ತಿದ್ದ ಯುವಕ!
ಅತೀಯಾಗಿ ಇಯರ್ ಬಡ್ ಬಳಸುತ್ತಿದ್ದ 18 ವರ್ಷದ ಯುವಕನೋರ್ವ ತನ್ನ ಶ್ರವಣ ಸಾಮರ್ಥ್ಯ ಕಳೆದುಕೊಂಡ(ಕಿವುಡುತನ) ಘಟನೆ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ.
ದೀರ್ಘ ಕಾಲದವರೆಗೂ ಇಯರ್ ಬಡ್(TWS Earbuds) ಬಳಸಿರುವುದರಿಂದ ಉಂಟಾದ ಸೋಂಕಿನಿಂದ ಯುವಕ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡಿರುವುದಾಗಿ ವೈದ್ಯರು ಹೇಳಿದ್ದರು, ಆತನಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಇದೀಗ ತನ್ನ ಶ್ರವಣ ಸಾಮರ್ಥ್ಯವನ್ನು ಮರಳಿ ಪಡೆದ್ದಾನೆ.
ಜನರು ದೀರ್ಘ ಕಾಲದ ವರೆಗೆ ಇಯರ್ ಬಡ್ ನ್ನು ಕಿವಿಯಲ್ಲಿ ಇಟ್ಟುಕೊಳ್ಳುವುದರಿಂದಾಗಿ ಕಿವಿಯಲ್ಲಿ ತೇವಾಂಶ ಉಂಟಾಗುತ್ತದೆ. ಇದು ಬ್ಯಾಕ್ಟೀರಿಯಾಗಳು, ವೈರಸ್ ಗಳು ಕಿವಿಯಲ್ಲಿ ಹುಟ್ಟಲು ಕಾರಣವಾಗುತ್ತದೆ.
ನಮ್ಮ ದೇಹದಂತೆಯೇ ಕಿವಿಯೊಳಗೂ ಬೆವರುತ್ತದೆ. ದೀರ್ಘ ಕಾಲದವರೆಗೆ ಇಯರ್ ಬಡ್ ಕಿವಿಯನ್ನು ಮುಚ್ಚಿರುವುದರಿಂದ ಬೆವರು ಸೃಷ್ಟಿಯಾಗಿ ಸೋಂಕಿನ ಶೇಖರಣೆಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇಯರ್ ಬಡ್ ಬಳಸುವವರು ಕಡಿಮೆ ಅವಧಿಯಲ್ಲಿ ಬಳಸಿ, ಜೊತೆಗೆ ಅತಿಯಾದ ವಾಲ್ಯುಮ್ ಮಟ್ಟವನ್ನು ಕಡಿಮೆ ಮಾಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಜೊತೆಗೆ ಇಯರ್ ಬಡ್ ಗಳ ಬದಲು ಓವರ್ ಇಯರ್ ಹೆಡ್ ಫೋನ್ ಗಳನ್ನು ಬಳಸಿ, ಅವು ಧ್ವನಿಯನ್ನು ಸಮಾನವಾಗಿ ವಿತರಿಸುತ್ತವೆ ಎಂದು ವೈದ್ಯರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw