ಹಂಪಿ ಸ್ಮಾರಕ ಏರಿ ರೀಲ್ಸ್ ಮಾಡಿದ್ದ ಯುವಕ ಅರೆಸ್ಟ್
ವಿಜಯನಗರ: ಹಂಪಿಯ ಸುರಕ್ಷಿತ ಸ್ಮಾರಕಗಳ ಮೇಲೆ ಏರಿ ರೀಲ್ಸ್ ಮಾಡಿದ ಯೂಟ್ಯೂಬರ್ ಮಂಡ್ಯ ಮೂಲದ ದೀಪಕ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದೀಪಕ್ ಗೌಡ ಹಂಪಿಯ ಸುರಕ್ಷಿತ ಸ್ಮಾರಕದ ಮೇಲೆ ಹತ್ತಿ ಕೇಳಿಸದೇ ಕಲ್ಲುಕಲ್ಲಿನಲಿ ಅನ್ನೋ ಹಾಡಿಗೆ ಭರತನಾಟ್ಯ ಮಾಡಿದ್ದು, ಇದನ್ನು ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದ.
ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆಯೇ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬರುತ್ತಿದ್ದಂತೆಯೇ ಯುವಕನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಇದೀಗ ಹಂಪಿಯ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ:
ಇನ್ನೂ ಹಂಪಿಯ ಸುರಕ್ಷಿತ ಸ್ಮಾರಕಗಳ ಸುರಕ್ಷತೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕೂಡ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಯುವಕ ಸ್ಮಾರಕಗಳ ಮೇಲೆ ಹುಚ್ಚಾಟ ಆಡಿದರೂ, ಆತನನ್ನು ತಡೆಯಲು ಸ್ಥಳದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ, ವಿಡಿಯೋ ವೈರಲ್ ಆದ ಬಳಿಕವೇ ಅಧಿಕಾರಿಗಳಿಗೆ ಕೂಡ ಈ ವಿಚಾರ ತಿಳಿದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದ್ದು, ಈ ನಿಟ್ಟಿನಲ್ಲಿ ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಅನ್ನೋ ಒತ್ತಾಯಗಳು ಕೇಳಿ ಬಂದಿವೆ.
ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದ ಯುವಕ:
ಹಂಪಿಯಲ್ಲಿ ಹುಚ್ಚಾಟ ಮೆರೆದಿದ್ದ ಯುವಕ ದೀಪಕ್ ಗೌಡ ಈ ವಿಚಾರ ಗಂಭೀರತೆ ಪಡೆಯುತ್ತಿದ್ದಂತೆಯೇ ತನ್ನ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದ. ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ, ಇನ್ನು ಮುಂದೆ ಈ ರೀತಿಯಾಗಿ ಮಾಡುವುದಿಲ್ಲ, ನಾನು ವಿಡಿಯೋ ಮಾಡುವ ವೇಳೆ ಅಲ್ಲಿ ಯಾವುದೇ ಸೆಕ್ಯೂರಿಟಿ ಗಾರ್ಡ್ ಗಳು ಇರಲಿಲ್ಲ ಅನ್ನೋ ಮಾತನ್ನು ಕೂಡ ಯುವಕ ತನ್ನ ಹೇಳಿದ್ದ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw