ಕಾಂಡೋಮ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಯುವಕರು!: ಮೆಡಿಕಲ್ ಅಂಗಡಿಯವರಿಗೆ ಶಾಕ್! - Mahanayaka

ಕಾಂಡೋಮ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಯುವಕರು!: ಮೆಡಿಕಲ್ ಅಂಗಡಿಯವರಿಗೆ ಶಾಕ್!

condom
01/06/2023

ಏಡ್ಸ್ ನಂತಹ ಮಹಾಮಾರಿ ರೋಗವನ್ನು ತಡೆಗಟ್ಟಲು, ಸುರಕ್ಷಿತ ಲೈಂಗಿಕ ಕ್ರಿಯೆಗೆ ಕಾಂಡೋಮ್ ಗಳನ್ನು ಬಳಸುವುದನ್ನು ನೀವೆಲ್ಲರೂ ಕೇಳಿರುತ್ತೀರಿ, ಆದ್ರೆ, ಇದೀಗ ಯುವಕರು ಮಾದಕ ವ್ಯಸನಕ್ಕೆ ಕಾಂಡೋಮ್ ನ್ನು ಬಳಸುತ್ತಿರುವ ಆತಂಕಕಾರಿ ಘಟನೆ ವರದಿಯಾಗಿದೆ.


Provided by

ಹೌದು..! ಸದ್ಯ ಯುವಕರು ಕಾಂಡೋಮ್ ಖರೀದಿಸುವ ಸಂಖ್ಯೆ ಹೆಚ್ಚಾಗುತ್ತಿದ್ದು, ಯುವಜನತೆಯ ಮಾದಕ ವ್ಯಸನವು ಅಪಾಯಕಾರಿಯತ್ತ ಸಾಗಿದೆ.  ಕೆಮಿಕಲ್ ನಿಂದ ಅಮಲೇರಿಸಿಕೊಳ್ಳಲು ಯುವಕರು ಕಾಂಡೋಮ್ ಖರೀದಿಗೆ ತೊಡಗಿದ್ದಾರೆ ಎಂದು ಮೆಡಿಕಲ್ ಸ್ಟೋರ್ ನ  ಅಂಗಡಿಯವರು ಬಹಿರಂಗ ಪಡಿಸಿದ್ದಾರೆನ್ನಲಾಗಿದೆ.

ವರದಿಗಳ ಪ್ರಕಾರ, ಸುವಾಸನೆ ಹೊಂದಿರುವ ಕಾಂಡೋಮ್ ಗಳನ್ನು ದೀರ್ಘ ಕಾಲದ ವರೆಗೆ ಬಿಸಿನೀರಿನಲ್ಲಿ ನೆನೆಸಿದರೆ ಸುವಾಸನೆಯಲ್ಲಿರುವ ದೊಡ್ಡ ರಾಸಾಯನಿಕ ಅಣುಗಳು ಒಡೆದು ಆಲ್ಕೋಹಾಲ್ ಯುಕ್ತ ಸಂಯಕ್ತವನ್ನು ರೂಪಿಸುತ್ತದೆ. ಈ ಸಂಯುಕ್ತ ಒಡೆದ ನಂತರ ಸುಗಂಧ ಮತ್ತು ಹೊಗೆ ಉಂಟು ಮಾಡುತ್ತದೆ. ಇದು ಮಾದಕತೆಯನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿದೆ. ಆದರೆ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಲ್ಲದು ಅನ್ನುವ ಮಾತುಗಳು ಕೇಳಿ ಬಂದಿವೆ.


Provided by

ಮಾದಕ ವ್ಯಸನವು ನೆಮ್ಮದಿಯ ಜೀವನವನ್ನು ಹೇಗೆ ಹಾಳು ಮಾಡುತ್ತದೆ ಎನ್ನುವುದಕ್ಕೆ ಇಂತಹ ಘಟನೆಗಳೇ ಕಾರಣ. ಕಾಂಡೋಮ್ ನಂತಹ ವಸ್ತುಗಳನ್ನು ಕೂಡ ಮಾದಕ ವ್ಯಸನಕ್ಕೆ ಬಳಸುವ ಪರಿಸ್ಥಿತಿ ಬಂದಿದೆ ಎಂದರೆ ಈ ಪ್ರಪಂಚ ಎಷ್ಟೊಂದು ಮತ್ತಿನಲ್ಲಿದೆ ಎನ್ನುವುದನ್ನು ಆಲೋಚಿಸಬೇಕಿದೆ. ಇಂತಹ ಹುಚ್ಚು ಸಾಹಸದಿಂದ ಅಮೂಲ್ಯವಾದ ಜೀವನವನ್ನು ಯುವಜನತೆ ಹಾಳು ಮಾಡಿಕೊಳ್ಳುತ್ತಿರುವುದರಂತೂ ದುರಂತ!

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ