ಚಲಿಸುತ್ತಿದ್ದ ಬೈಕ್ ನಲ್ಲಿ ಪರಸ್ಪರ ಮುತ್ತಿಟ್ಟ ಯುವಕರು!
ತಮಿಳುನಾಡಿನಲ್ಲಿ ಇಬ್ಬರು ಯುವತಿಯರು ದ್ವಿ-ಚಕ್ರ ವಾಹನವೊಂದರ ಮೇಲೆ ಪರಸ್ಪರ ಮುಖಾಮುಖಿಯಾಗಿ ಕುಳಿತು ಸವಾರಿ ಮಾಡಿ ಸುದ್ದಿಯಾಗಿದ್ದರು. ಆದ್ರೆ ಈ ರೆಕಾರ್ಡ್ ನ್ನು ಇಬ್ಬರು ಯುವಕರು ಬ್ರೇಕ್ ಮಾಡಿದ್ದಾರೆ.
ಒಂದೇ ಸ್ಕೂಟರ್ ಮೇಲೆ ಮೂವರು ಯುವಕರು ಪ್ರಯಾಣಿಸಿದ್ದಲ್ಲದೇ, ಹಿಂಬದಿಯ ಸವಾರರಿಬ್ಬರು ಪರಸ್ಪರ ಮುತ್ತಿಟ್ಟುಕೊಳ್ಳುವ ವಿಡಿಯೋವೊಂದು ವೈರಲ್ ಆಗಿದ್ದು, ಇದೀಗ ಯುವಕರಿಗೆ ಕಾನೂನಿನ ಸಂಕಷ್ಟ ಕೂಡ ಎದುರಾಗುವ ಸಾಧ್ಯತೆ ಕಂಡು ಬಂದಿದೆ.
ಉತ್ತರ ಪ್ರದೇಶದ ರಾಮ್ಪುರದಲ್ಲಿ ಈ ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, ಈ ಟ್ವೀಟ್ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಸಂಚಾರೀ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯೇಟರ್ ಗಳ ನಡುವೆ ಭಾರೀ ಸ್ಪರ್ಧೆಗಳು ನಡೆಯುತ್ತಿದೆ. ಒಬ್ಬರನ್ನು ಮೀರಿಸುವ ಸಾಹಸವನ್ನು ಮತ್ತೊಬ್ಬರು ಮಾಡುತ್ತಿದ್ದಾರೆ. ರೀಲ್ಸ್ ಕ್ರಿಯೇಟರ್ ಗಳ ಹುಚ್ಚಾಟಗಳು ಆಗಾಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw