ದಾಖಲೆಯ ಬೆಲೆಗೆ ಮಾರಾಟವಾದ ಚಿತ್ರ: ಈ ಚಿತ್ರದ ಹಿಂದಿನ ಕಥೆ ಏನು ಗೊತ್ತಾ? - Mahanayaka
6:14 PM Wednesday 5 - February 2025

ದಾಖಲೆಯ ಬೆಲೆಗೆ ಮಾರಾಟವಾದ ಚಿತ್ರ: ಈ ಚಿತ್ರದ ಹಿಂದಿನ ಕಥೆ ಏನು ಗೊತ್ತಾ?

historical story
20/08/2022

ಸೆರೆ ಮನೆಯಲ್ಲಿರುವ ವೃದ್ಧನಿಗೆ ಯುವತಿಯೊಬ್ಬಳು ಹಾಲುಣಿಸುವ ವಿಶೇಷ ವರ್ಣ ಚಿತ್ರ 30 ಮಿಲಿಯನ್ ಯುರೋಗೆ ಮಾರಾಟವಾಗಿದೆ. ಈ ಚಿತ್ರದಲ್ಲಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡ ಯುವತಿಯು ಸೆರೆಮನೆಯಲ್ಲಿರುವ ವೃದ್ಧನೊಬ್ಬನಿಗೆ ಹಾಲುಣಿಸುತ್ತಿರುವ ದೃಶ್ಯವಿದೆ. ಈ  ಚಿತ್ರವನ್ನು ಒಂದು ಬಾರಿ ನೋಡಿದರೆ, ಇದೊಂದು ಅಶ್ಲೀಲ ಚಿತ್ರ ಎಂದೇ ಸಾಕಷ್ಟು ಜನರು ಭಾವಿಸುತ್ತಾರೆ. ಆದರೆ, ಈ ಚಿತ್ರದ ಹಿಂದೆ ಒಂದು ಬೆಲೆಕಟ್ಟಲಾಗದ ಕಥೆ ಇದೆ.

ಫ್ರಾನ್ಸ್ ನಲ್ಲಿ ಲೂಯಿಸ್ XIV(Louis XIV )ನ ಆಳ್ವಿಕೆಯ ಸಂದರ್ಭದಲ್ಲಿ, ಬ್ರೆಡ್ ತುಂಡುಗಳನ್ನು ಕದ್ದಿದ್ದಕ್ಕಾಗಿ ವೃದ್ಧನೊಬ್ಬನಿಗೆ ಘೋರ ಶಿಕ್ಷೆಯನ್ನು ನೀಡಲಾಯಿತು. ಕಳ್ಳತನ ಮಾಡಿದ ತಪ್ಪಿಗಾಗಿ ವೃದ್ಧ ಹಸಿವಿನಿಂದಲೇ ಸಾಯಬೇಕು ಎನ್ನುವ ಶಿಕ್ಷೆಯನ್ನು ಲೂಯಿಸ್ ನೀಡಿದ. ಸೆರೆ ವಾಸದಲ್ಲಿರುವಾಗ ವೃದ್ಧನ ಮಗಳು ಹೊರತು ಪಡಿಸಿ ಬೇರೆ ಯಾರೂ ಕೂಡ ಆತನನ್ನು ಭೇಟಿ ಮಾಡಬಾರದು. ಜೊತೆಗೆ ಆತನ ಭೇಟಿ ಮಾಡಲು ಹೋಗುವ ವೇಳೆ ಯಾವುದೇ ಆಹಾರ ತೆಗೆದುಕೊಂಡು ಹೋಗಬಾರದು ಎಂದು ಕಟ್ಟಪ್ಪಣೆ ಹೊರಡಿಸಲಾಗಿತ್ತು.

ಹೀಗೆ ಸುಮಾರು 4 ತಿಂಗಳವರೆಗೂ ವೃದ್ಧನನ್ನು ನೋಡಲು ಪ್ರತೀ ದಿನ ಆತನ ಮಗಳು ಬರುತ್ತಿದ್ದಳು. ವೃದ್ಧ ಆಹಾರವಿಲ್ಲದೆಯೇ 4 ತಿಂಗಳುಗಳ ಕಾಲ ಬದುಕಿದ್ದನ್ನು ನೋಡಿ ಅಚ್ಚರಿಗೀಡಾದ ಅಧಿಕಾರಿಗಳಿಗೆ ಆತನ ಮಗಳ ಮೇಲೆ ಅನುಮಾನ ಬಂತು. ಹೀಗೆ ಒಂದು ದಿನ ರಹಸ್ಯವಾಗಿ ಅವರು ಯುವತಿಯ ಮೇಲೆ ಕಣ್ಣಿಟ್ಟರು. ಈ ವೇಳೆ ವೃದ್ಧನ ಮಗಳು ಸೆರೆಯಲ್ಲಿದ್ದ ತನ್ನ ತಂದೆಗೆ ಎದೆ ಹಾಲುಣಿಸುತ್ತಿರುವ ದೃಶ್ಯ ಕಂಡು ಅಧಿಕಾರಿಗಳು ಬೆಚ್ಚಿ ಬೆರಗಾದರು.

ಕೊನೆಗೆ ಆ ಯುವತಿಗೆ ತನ್ನ ತಂದೆಯ ಮೇಲಿರುವ ಪ್ರೀತಿ, ಮಮಕಾರವನ್ನು ಕಂಡು ಆತನ ತಪ್ಪನ್ನು ಮನ್ನಿಸಿ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಈ ರಿಯಲ್ ಸ್ಟೋರಿಯನ್ನು ಸಾರುವ ಪುರಾತನ ಕಾಲದ ಚಿತ್ರಕ್ಕೆ  ಇದೀಗ ಭಾರೀ ಬೇಡಿಕೆಯಾಗಿದ್ದು, ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ