ನಗ್ನ ವಿಡಿಯೋ ಕರೆ ಮಾಡುವಂತೆ ಯುವತಿಗೆ ಒತ್ತಾಯ: ಯುವಕನಿಗೆ ಥಳಿತ

ಮಂಗಳೂರು: ಯುವಕನೊಬ್ಬ ಯುವತಿಯನ್ನು ಭೇಟಿಯಾಗಲು ಬಂದು ಸಾರ್ವಜನಿಕರಿಂದ ಥಳಿತಕ್ಕೊಳಗಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಕನ್ಯಾನದಲ್ಲಿ ನಡೆದಿದೆ.
ಕನ್ಯಾನ ನಿವಾಸಿ ಸವಾದ್(26) ಎಂಬ ಯುವಕ ಹಲ್ಲೆಗೊಳಗಾದ ಯುವಕ ಎಂದು ತಿಳಿದು ಬಂದಿದೆ. ಬೆಂಗಳೂರಿನ ಬಟ್ಟೆ ಮಳಿಗೆಯಲ್ಲಿ ಈತ ಕೆಲಸ ಮಾಡುತ್ತಿದ್ದು, ಹಬ್ಬಕ್ಕೆಂದು ಊರಿಗೆ ಬಂದಿದ್ದ. ವಿಟ್ಲದ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ನಂಬರ್ ನ್ನು ಪಡೆಯಲು ಆತ ಮುಂದಾಗಿದ್ದ ಆದ್ರೆ, ಯುವತಿ ತನ್ನ ಸಹೋದ್ಯೋಗಿಯ ನಂಬರ್ ನ್ನು ನೀಡಿದ್ದಳು.
ಇದು ಯುವತಿಯ ನಂಬರ್ ಎಂದು ಭಾವಿಸಿದ್ದ ಯುವಕ, ನಿರಂತರವಾಗಿ ಮೆಸೆಜ್ ಮಾಡಲು ಆರಂಭಿಸಿದ್ದಾನ. ಅಲ್ಲದೇ ತಡರಾತ್ರಿ ಅಶ್ಲೀಲ ವಿಡಿಯೋ ಕಳುಹಿಸಿ, ವಿಡಿಯೋಕಾಲ್ ಮಾಡಿ ನಿನ್ನ ಅಂಗಾಂಗ ತೋರಿಸು ಎಂದು ವಾಯ್ಸ್ ಮೆಸೆಜ್ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.
ಬಳಿಕ ತನ್ನನ್ನು ಭೇಟಿಯಾಗುವಂತೆ ಒತ್ತಾಯಿಸಿದ್ದ. ಅತ್ತ ಯುವತಿಯಂತೆ ಚಾಟ್ ಮಾಡುತ್ತಿದ್ದ ಯುವಕ ಭೇಟಿಯಾಗಲು ಬರುವುದಾಗಿ ಒಪ್ಪಿಗೆ ನೀಡಿದ್ದ. ಯುವತಿಯ ಭೇಟಿಗಾಗಿ ಐಸ್ ಕ್ರೀಂ ಚಾಕೊಲೇಟ್ ಹಿಡಿದು ಸವಾದ್ ಬಂದ ವೇಳೆ ಕಾದು ಕುಳಿತಿದ್ದ ಸ್ಥಳೀಯರು ಥಳಿಸಿ, ಆತನ್ನು ಹಿಡಿದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: