ಬ್ಯಾಂಕ್ ಲಾಕರ್ ನಲ್ಲಿಟ್ಟಿರುವ ನಿಮ್ಮ ಹಣ, ವಸ್ತುಗಳು ಸೇಫ್ ಅಲ್ಲ | ಇಲ್ಲಿ ನೋಡಿ ಎಂತಹ ಘಟನೆ ನಡೆದು ಹೋಗಿದೆ!
ವಡೋದರ: ಬ್ಯಾಂಕ್ ನಲ್ಲಿ ತನ್ನ ಹಣ ಸೇಫ್ ಅಂದುಕೊಂಡು ಗ್ರಾಹಕರೊಬ್ಬರು ಬ್ಯಾಂಕ್ ಆಫ್ ಬರೋಡಾದ ಲಾಕರ್ ನಲ್ಲಿ 2.2 ಲಕ್ಷ ಹಣ ಇಟ್ಟಿದ್ದರು. ಆದರೆ ಆ ಬಳಿಕ ಲಾಕರ್ ತೆರೆದು ನೋಡಿದಾಗ ಶಾಕ್ ಗೊಳಲಾಗಿದ್ದಾರೆ.
ಗುಜರಾತ್ ನ ವಡೋದರದಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಆಫ್ ಬರೋಡದ ಗ್ರಾಹಕರೊಬ್ಬರು ಬ್ಯಾಂಕ್ ನ ಲಾಕರ್ ನಲ್ಲಿ ತಮ್ಮ ಹಣ ಇಟ್ಟಿದ್ದರು. ಕೆಲವು ಸಮಯಗಳ ಬಳಿಕ ಗ್ರಾಹಕರು ಬ್ಯಾಂಕ್ ಗೆ ತೆರಳಿ, ಲಾಕರ್ ತೆರೆದು ನೋಡಿದಾಗ ಲಾಕರ್ ನಲ್ಲಿದ್ದ ಹಣಕ್ಕೆ ಗೆದ್ದಲು ಹಿಡಿದಿದ್ದು, ಹಣವನ್ನೆಲ್ಲ ಗೆದ್ದಲು ತಿಂದು ಹಾಕಿದೆ.
ಇನ್ನೂ ತನ್ನ ಹಣವನ್ನು ಗೆದ್ದಲು ತಿಂದಿದೆ ಎಂದು ಬ್ಯಾಂಕ್ ಗ್ರಾಹಕ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಬ್ಯಾಂಕ್ ಸಿಬ್ಬಂದಿಯು, ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಉತ್ತರ ನೀಡಿದ್ದಾರೆ. ಈ ಘಟನೆಯಿಂದಾಗಿ ಬ್ಯಾಂಕ್ ಆಫ್ ಬರೋಡದಲ್ಲಿ ಭದ್ರತೆಯ ಬಗ್ಗೆ ಗ್ರಾಹಕರಲ್ಲಿ ಆತಂಕ ಮೂಡಿದೆ.
ಇನ್ನೂ ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮಗಳ ಪ್ರಕಾರ, ಲಾಕರ್ ನಲ್ಲಿಟ್ಟ ಹಣ ಅಥವಾ ಬೆಳೆಬಾಳುವ ವಸ್ತುಗಳು ಕಳವಾದರೆ, ಅದಕ್ಕೆ ಬ್ಯಾಂಕ್ ಹೊಣೆಯಲ್ಲ ಎಂದಿದೆ.ಇದು ಬ್ಯಾಂಕ್ ಗಳಿಗೆ ವರದಾನವಾಗಿದೆ.