ಹೃದಯಾಘಾತ: ಯುವ ಜಾಗೃತ ಮತದಾರರ ವೇದಿಕೆ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ನಿಧನ
ಕೊಟ್ಟಿಗೆಹಾರ : ಮೂಡಿಗೆರೆ ತಾಲೂಕು ಪಲ್ಗುಣಿ ಗ್ರಾಮದ ಮಹೇಂದ್ರ ಕುಮಾರ್ ಪಲ್ಗುಣಿ (57) ಅವರಿಗೆ ಇಂದು ಬೆಳಿಗ್ಗೆ ಮೂಡಿಗೆರೆ ಕೃಷ್ಣ ಪುರದ ಅವರ ಅಕ್ಕನ ಮನೆಯಲ್ಲಿ ಬೆಳಿಗ್ಗೆ 8.45.ಕ್ಕೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ದಾಖಲು ಮಾಡಿದರು. ಚಿಕಿತ್ಸೆ ಪಲಕಾರಿ ಆಗದೆ ಮೃತ ಪಟ್ಟಿದ್ದಾರೆ.
ಮೃತರು ಒಬ್ಬ ಸಹೊದರ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಅವಿವಾಹಿತರಾಗಿದ್ದ ಮೃತರು ಬೆಂಗಳೂರಿನಲ್ಲಿ ಉದ್ಯಮ ನಡೆಸುತಿದ್ದರು ಮತ್ತು ತಾವೇ ಯುವ ಜಾಗೃತ ಮತದಾರರ ವೇದಿಕೆಯನ್ನು ಹುಟ್ಟು ಹಾಕಿ ಅದರ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಸಮಾಜ ಸೇವೆಯಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದರು. ಮಲೆನಾಡು ಭಾಗದ ಅನೇಕ ಯುವಕ ಯುವತಿಯರಿಗೆ ಬೆಂಗಳೂರಿನಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಕೊಡಿಸಿದ್ದರು. ಯುವಕರಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಇವರನ್ನು ಇವರ ಸ್ನೇಹಿತರ ಬಳಗ ಪ್ರೀತಿಯಿಂದ ಗುರೂಜಿ ಎಂದೆ ಕರೆಯುತ್ತಿದ್ದರು.
ಮಹೇಂದ್ರ ಕುಮಾರ್ ಅವರ ಅಕಾಲಿಕ ನಿಧನದಿಂದ ಅವರ ಕುಟುಂಬದವರು ಮತ್ತು ಸ್ನೇಹಿತರ ಬಳಗ ತೀವ್ರ ಅಘಾತಕ್ಕೆ ಒಳಗಾಗಿದ್ದಾರೆ.
ಇಂದು ಶನಿವಾರ ಸಂಜೆ ಅವರ ಹುಟ್ಟೂರು ಮೂಡಿಗೆರೆ ಸಮೀಪದ ಪಲ್ಗುಣಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: