ಯೂಟ್ಯೂಬ್ ನೋಡಿಕೊಂಡು ಪತ್ನಿಗೆ ಡೆಲಿವರಿ ಮಾಡಲು ಯತ್ನಿಸಿದ ಪತಿ: ಮಗು ಸಾವು, ಮಹಿಳೆಯ ಸ್ಥಿತಿ ಚಿಂತಾಜನಕ - Mahanayaka
4:52 AM Tuesday 10 - December 2024

ಯೂಟ್ಯೂಬ್ ನೋಡಿಕೊಂಡು ಪತ್ನಿಗೆ ಡೆಲಿವರಿ ಮಾಡಲು ಯತ್ನಿಸಿದ ಪತಿ: ಮಗು ಸಾವು, ಮಹಿಳೆಯ ಸ್ಥಿತಿ ಚಿಂತಾಜನಕ

youtube delivery
21/12/2021

ರಾಣಿಪೇಟೆ: ಯೂಟ್ಯೂಬ್ ನೋಡಿ ಪತ್ನಿಯ ಡೆಲಿವರಿ ಮಾಡಲು ಪತಿ ಯತ್ನಿಸಿದ್ದು, ಪರಿಣಾಮವಾಗಿ ಶಿಶು ಸಾವನ್ನಪ್ಪಿ, ಮಹಿಳೆಯ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಮಿಳುನಾಡಿನ ರಾಣಿಪೇಟೆಯಲ್ಲಿ ನಡೆದಿದೆ. ಶಿಶು ಸಾವನ್ನಪ್ಪಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ನೆಮಿಲಿ ತಾಲೂಕಿನ ಪಣಪಕ್ಕಂ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ನೆಡುಂಪುಲಿ ಗ್ರಾಮದ ಸಣ್ಣ ವ್ಯಾಪಾರಿಯಾಗಿರುವ ಆರ್.ಲೋಗನಾಥನ್(34) ತನ್ನ ಪತ್ನಿ 28 ವರ್ಷ ವಯಸ್ಸಿನ ಎಲ್.ಗೋಮತಿ ಎಂಬವರಿಗೆ ಯೂಟ್ಯೂಬ್ ವಿಡಿಯೋ ನೋಡಿಕೊಂಡು ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಆದರೆ, ಹೆರಿಗೆ ವೇಳೆ ಮಗು ಸಾವನ್ನಪ್ಪಿದ್ದು, ಗೋಮತಿ ತೀವ್ರ ರಕ್ತಸ್ರಾವಗೊಂಡು ಚಿಂತಾಜನಕ ಸ್ಥಿತಿಗೆ ತಲುಪಿದ್ದಾರೆ. ಈ ವೇಳೆ ಆರೋಪಿ ಲೋಗನಾಥನ್, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.

ಸದ್ಯ ಗೋಮತಿ ವೆಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಶಿಶುವಿನ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದೆ. ಆಸ್ಪತ್ರೆಯ ದೂರಿನನ್ವಯ ಪೊಲೀಸರು ಲೋಗನಾಥನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ವರ್ಷ ಜೂನ್ ನಲ್ಲಿ ಲೋಗನಾಥನ್ ಹಾಗೂ ಗೋಮತಿಯ ವಿವಾಹ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಯೂಟ್ಯೂಬ್ ಗೀಳಿಗೆ ಬಿದ್ದ ಪತಿಯಿಂದಾಗಿ ಮಗು ಸಾವನ್ನಪ್ಪಿರುವುದೇ ಅಲ್ಲದೇ ಪತ್ನಿಯ ಜೀವಕ್ಕೂ ಅಪಾಯವಾಗುವಂತಹ ಸ್ಥಿತಿ ಬಂದಿದೆ.

ಇನ್ನೂ, ಘಟನೆಯ ಬಗ್ಗೆ ರಾಣಿಪೇಟೆ ಜಿಲ್ಲಾಧಿಕಾರಿ ಡಿ.ಭಾಸ್ಕರ್ ಪಾಂಡಿಯನ್ ಪ್ರತಿಕ್ರಿಯಿಸಿ,  ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಸುರಕ್ಷಿತ ಹೆರಿಗೆ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕನ್ನಡ ಬಾವುಟ ಸುಟ್ಟು, ಬಸವಣ್ಣನ ಚಿತ್ರ ಅಪವಿತ್ರಗೊಳಿಸಿದ ಮೂವರು ಆರೋಪಿಗಳ ಬಂಧನ

ಮೊದಲ ಬಲಿ ಪಡೆದುಕೊಂಡ ಒಮಿಕ್ರಾನ್: 50 ವರ್ಷದ ವ್ಯಕ್ತಿ ಸಾವು

ರಶ್ಮಿಕಾ ಮಂದಣ್ಣ ಜೊತೆಗೆ ತೆರೆ ಹಂಚಿಕೊಳ್ಳುತ್ತಾರಾ ಡಾಲಿ ಧನಂಜಯ್?

ಆನ್ ಲೈನ್ ಕ್ಲಾಸ್ ನ ಗ್ರೂಪ್ ಗೆ ಅಶ್ಲೀಲ ವಿಡಿಯೋ ಶೇರ್ ಮಾಡಿದ ಗಣಿತ ಶಿಕ್ಷಕ!

ಬೆಳಗಾವಿ ಸುವರ್ಣಸೌಧ ಮುತ್ತಿಗೆ ಯತ್ನ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮೈಸೂರು: ಮ್ಯಾನ್ ಹೋಲ್ ಸ್ವಚ್ಛತೆಗೆ ಇಳಿದ ಪೌರಕಾರ್ಮಿಕ ಸಾವು

ಮಂಗಳೂರು: ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಅತಿಥಿ ಉಪನ್ಯಾಸಕನ ಬಂಧನ

 

ಇತ್ತೀಚಿನ ಸುದ್ದಿ