YouTube ಚಾನಲ್ ಮೂಲಕ ಕೋಮುವಾದ ಪ್ರಚಾರ: ಆ್ಯಂಕರ್ ಅರೆಸ್ಟ್
ನೆಯ್ಯಟ್ಟಿಂಕರ: ಯೂಟ್ಯೂಬ್ ಚಾನೆಲ್ ಮೂಲಕ ಕೋಮುವಾದ ಪ್ರಚಾರ ಮಾಡುವ ವಿಡಿಯೋವನ್ನು ಪ್ರಸ್ತುತಪಡಿಸಿದ ಆ್ಯಂಕರ್ ನನ್ನು ಬಂಧಿಸಲಾಗಿದೆ.
ಮಣಲೂರು ಮತ್ತು ಕಣಿಯಂಕುಲಂನ ನೆಯ್ಯಟ್ಟಿಂಕರ ನಿವಾಸಿ ಬಾದುಶಾ ಜಮಾಲ್ (32) ಬಂಧಿತ ಆರೋಪಿಯಾಗಿದ್ದು ಬಂಧನದ ವೇಳೆ ಆರೋಪಿಯ ಕಂಪ್ಯೂಟರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಯುವಕ ಹಾಗೂ ಆತನ ಕುಟುಂಬದ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆಯ ಕುರಿತು ಈ ಯುವಕ ವರದಿ ಪ್ರಕಟಿಸಿದ್ದ ಎನ್ನಲಾಗಿದೆ.
ಕಳೆದ ವಾರ ವಝಿಮುಖ್ ಮೂಲದ ನಿಜಾಮ್ ಅವರ ಪತ್ನಿ ಅನ್ಸಿಲಾ ಮತ್ತು ಅವರ ಎರಡು ವರ್ಷದ ಮಗುವಿನ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ನೆಯ್ಯಟ್ಟಿಂಕರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಆರೋಪಿಗಳನ್ನು ಇನ್ನೂ ಬಂಧಿಸಿರಲಿಲ್ಲ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾದುಶಾ ಜಮಾಲ್ ಅವರು, ಡೆಮಾಕ್ರಸಿ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಸಮಾಜದಲ್ಲಿ ಕೋಮುವಾದ ಬೆಳೆಸುವ ರೀತಿಯಲ್ಲಿ ವರದಿ ಪ್ರಸಾರ ಮಾಡಿದ್ದು, ಆರೋಪಿಗಳು ನಿರ್ದಿಷ್ಟ ಧರ್ಮಕ್ಕೆ ಸೇರಿದವರಾಗಿರುವುದರಿಂದ ಬಂಧನ ವಿಳಂಬವಾಗಿದೆ ಎಂದು ಘಟನೆಯನ್ನು ನಿರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯು ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಸಮಾಜದಲ್ಲಿ ಕೋಮುವಾದಿ ಪ್ರಚಾರ ಮಾಡುವ ಇತರ ವೀಡಿಯೊಗಳನ್ನು ಪ್ರಸಾರ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹೋಳಿ ಆಡುತ್ತಿದ್ದ ವೇಳೆ ದುರಂತ: ನೀರಿನ ತೊಟ್ಟಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು
ಉಕ್ರೇನ್ ನಲ್ಲಿ ಇನ್ನೂ ಸಿಲುಕಿರುವ 50 ಭಾರತೀಯರು
ಆದಿಚುಂಚನಗಿರಿ ಮಹಾರಥೋತ್ಸದಲ್ಲಿ ಕಾಲ್ತುಳಿತ: ವೃದ್ಧೆ ಬಲಿ