Y’S Men club of mangaluru: ಸಾಮಾಜಿಕ ಸೇವೆಗಳ ಕಿರುಪರಿಚಯ
ಮಂಗಳೂರು: ವೈಸ್ ಮೆನ್ ಕ್ಲಬ್ ಆಫ್ ಮಂಗಳೂರು (Y’S Men club of mangaluru) ಸಾಮಾಜಿಕ ಕಾರ್ಯಗಳಿಗೆ ಹೆಸರಾಗಿದ್ದು, 1822 ರಲ್ಲಿ ಅಮೆರಿಕದಲ್ಲಿ ನಿವೃತ್ತ ನ್ಯಾಯಾಲಯದ ನ್ಯಾಯಾಧೀಶರು ಇದನ್ನು ಸ್ಥಾಪಿಸಿದರು.
ಸಾಮಾಜಿಕ ಸೇವೆಯ ಧ್ಯೇಯದೊಂದಿಗೆ ಮಂಗಳೂರಿನಲ್ಲಿ 28ನೇ ಅಕ್ಟೋಬರ್ 2018 ರಲ್ಲಿ ಪ್ರಾರಂಭವಾದ ವೈಸ್ ಮೆನ್ ಕ್ಲಬ್ ಆಫ್ ಮಂಗಳೂರು, ನಿರಾಶ್ರಿತರಿಗೆ ಸಹಾಯ ಮಾಡುವುದು, ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುವುದು, ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ನೆರವು ನೀಡುವುದು ಮೊದಲಾದ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ಕೊವಿಡ್ ಸಂದರ್ಭದಲ್ಲಿ 700 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ವೈಸ್ ಮೆನ್ ಕ್ಲಬ್ ಆಫ್ ಮಂಗಳೂರು ಗಮನ ಸೆಳೆದಿತ್ತು. ಪ್ರಸ್ತುತ ಪ್ರತೀ ತಿಂಗಳು ವಯೋವೃದ್ಧರು ಮತ್ತು ನಿರಾಶ್ರಿತರಾಗಿರುವ 35 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಬಜಲ್ ನಲ್ಲಿ ವೈಸ್ ಮೆನ್ ಕ್ಲಬ್ ಆಫ್ ಮಂಗಳೂರು ಮತ್ತು ಗಣಪತಿ ಯುವಕಮಂಡಲದ ಸಂಯುಕ್ತಾಶ್ರಯದಲ್ಲಿ 1500 ಸದಸ್ಯರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗಿದೆ. ಮರೋಳಿಯಲ್ಲಿ 350 ಆಹಾರ ಕಿಟ್ ನ್ನು ನಿರಾಶ್ರಿತರಿಗೆ, ವಯೋವೃದ್ಧರಿಗೆ ನೀಡಲಾಗಿದೆ. 2018 ರಿಂದ ಬಡವರಿಗೆ ಆಸ್ಪತ್ರೆ ಚಿಕಿತ್ಸೆಗಾಗಿ 7,50,000 ರೂ. ಗಳನ್ನು ನೀಡಲಾಗಿದೆ. ಹೀಗೆ ಸಂಸ್ಥೆಯು ತನ್ನ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದೆ.
ಪ್ರಸ್ತುತ ಮಂಗಳೂರು ಕ್ಲಬ್ ಅಧ್ಯಕ್ಷರಾದ ಆ್ಯಂಟನಿ ಕೆ.ಜೆ. ಮತ್ತು ಕಾರ್ಯದರ್ಶಿಯಾದ ಶಿಬು ಕೆ.ಒ. ಮತ್ತು ಟ್ರೆಶರ್ ಸುನಿಲ್ ಸುರೇಶ್ ಅವರನ್ನೊಳಗೊಂಡ 23 ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿದೆ.