ಯುದ್ದಪೀಡಿತ ರಷ್ಯಾ ವಿರುದ್ಧ ಸಂಘರ್ಷಕ್ಕೆ ಇಳಿಯುವುದಿಲ್ಲ: ಜೋ ಬೈಡನ್
ವಾಷಿಂಗ್ಟನ್: ಯುದ್ದಪೀಡಿತ ರಷ್ಯಾ ವಿರುದ್ಧ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದು ಅಮೇರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಹೇಳಿದ್ದಾರೆ.
ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಮಾತನಾಡಿದ ಅವರು, ಉಕ್ರೆನ್‌ನಲ್ಲಿ ರಷ್ಯಾ ಸೇನೆ ವಿರುದ್ಧ ನಮ್ಮ ಪಡೆಗಳು ಸಂಘರ್ಷದಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ತೊಡಗಿಸಿಕೊಳ್ಳವುದೂ ಇಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಎರಡನೇ ಮಹಾಯುದ್ದದ ಬಳಿಕ ಯುರೋಪ್‌ನಲ್ಲಿ ಶಾಂತಿ ಕಾಪಾಡಲು ನ್ಯಾಟೊ ರೂಪಿಸಲಾಗಿದೆ. ಈ ಸಂಘರ್ಷದಲ್ಲಿ ಉಕ್ರೇನ್‌ಗೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದರು.
ಯುರೋಪ್‌ನಲ್ಲಿ ಅಮೇರಿಕ ಪಡೆಗಳನ್ನು ನಿಯೋಜಿಸಿರುವುದು ಉಕ್ರೇನ್‌ನಲ್ಲಿ ಹೋರಾಡಲು ಅಲ್ಲ. ಆದರೆ ಪುಟಿನ್ ಪಶ್ಚಿಮದತ್ತ ಚಲಿಸಲು ನಿರ್ಧರಿಸಿದರೆ ನ್ಯಾಟೊ ಮಿತ್ರ ರಾಷ್ಟ್ರಗಳನ್ನು ರಕ್ಷಿಸಲು ಸೇನೆ ನಿಯೋಜಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಯುದ್ಧ ಪೂರ್ವನಿಯೋಜಿತ ಮತ್ತು ಅಪ್ರಚೋದಿತ ಎಂದು ಆರೋಪಿಸಿದ್ದಾರೆ. ಇದಕ್ಕಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಬೈಡನ್ ಎಚ್ಚರಿಸಿದ್ದರಲ್ಲದೆ, ರಷ್ಯಾದ ಮೇಲೆ ಮತ್ತಷ್ಟು ಕಠಿಣ ಆರ್ಥಿಕ ನಿರ್ಬಂಧ ಹೇರುವುದು ಬೈಡನ್ ಪ್ರಕಟಿಸಿದರು.
ಅಮೇರಿಕ ವಾಯುಪ್ರದೇಶದಲ್ಲಿ ರಷ್ಯಾದ ವಿಮಾನಗಳಿಗೆ ನಿರ್ಬಂಧ ಹೇರುವುದಾಗಿ ಬೈಡನ್ ಘೋಷಿಸಿದರು.ರಷ್ಯಾ ರಾಜತಾಂತ್ರಿಕತೆಯನ್ನು ತಿರಸ್ಕರಿಸಿದೆ. ಪಶ್ಚಿಮ ಹಾಗೂ ನ್ಯಾಟೋ ರಾಷ್ಟ್ರಗಳು ಪ್ರತಿಕ್ರಿಯಿಸುವುದಿಲ್ಲ ಎಂದರು ಅವರು ಭಾವಿಸಿದ್ದರು. ಅವರು ನಮ್ಮನ್ನು ವಿಭಜಿಸಬಹುದು ಎಂದು ಭಾವಿಸಿದ್ದರು. ಆದರೆ ಪುಟಿನ್ ಗ್ರಹಿಕೆ ತಪ್ಪಾಗಿತ್ತು. ನಾವು ಸಜ್ಜಾಗಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉಕ್ರೇನ್ ಮೇಲೆ ರಷ್ಯಾ ದಾಳಿ: ಕನ್ನಡಿಗ ನವೀನ್ ಮೃತದೇಹ ಪತ್ತೆ
ಭೀಕರ ಅಪಘಾತ; ತಂದೆ -ಮಗಳು ಸ್ಥಳದಲ್ಲೇ ಸಾವು
ಲಾಡ್ಜ್ ಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ: ನಾಲ್ವರು ಆರೋಪಿಗಳ ಬಂಧನ
ಈಶ್ವರಪ್ಪ, ಬಿ.ವೈ. ರಾಘವೇಂದ್ರ ಟಿಕೆಟ್ ತ್ಯಜಿಸಿ ಹರ್ಷನ ತಂಗಿ, ತಾಯಿಗೆ ನೀಡಲಿ: ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹೀಂ
ಬದುಕಿರುವ ವಾಪಸ್ ಕರೆ ತರದೆ ಹೆಣಗಳನ್ನು ತರುತ್ತಿದ್ದಾರೆ: ಡಿ.ಕೆ.ಶಿವಕುಮಾರ್