ಕಡಿಮೆ ಬೆಲೆಯ ಚಿನ್ನಾಭರಣ ಖರೀದಿಸಲು ಹೋಗಿದ್ದ ಯುವಕ ಶವವಾಗಿ ಪತ್ತೆ! - Mahanayaka
11:10 PM Wednesday 1 - January 2025

ಕಡಿಮೆ ಬೆಲೆಯ ಚಿನ್ನಾಭರಣ ಖರೀದಿಸಲು ಹೋಗಿದ್ದ ಯುವಕ ಶವವಾಗಿ ಪತ್ತೆ!

bangalore crime
26/01/2022

ಬೆಂಗಳೂರು: ಕಡಿಮೆ ಬೆಲೆಗೆ ಚಿನ್ನಾಭರಣ ತರುತ್ತೇನೆ ಎಂದು ಹೋಗಿದ್ದ ಯುವಕ ಬರ್ಬರವಾಗಿ ಹತ್ಯೆಗೀಡಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹತ್ಯೆಗೀಡಾಗಿರುವ ಯುವಕನನ್ನು ದಿವಾಕರ ಎಂದು ಗುರುತಿಸಲಾಗಿದೆ. ಕಡಿಮೆ ಬೆಲೆಗೆ ಚಿನ್ನಾಭರಣ ಕೊಡುತ್ತೇವೆ ಎಂದು ಕರೆದಿದ್ದ ದುಷ್ಕರ್ಮಿಗಳು ೫ ಲಕ್ಷ ರೂಪಾಯಿ ಕೇಳಿದ್ದು, ಇದನ್ನು ನಂಬಿ ದಿವಾಕರ್‍ ಹಣದೊಂದಿಗೆ ತೆರಳಿದ್ದರು ಎಂದ ಹೇಳಲಾಗಿದೆ.

ಹಣದೊಂದಿಗೆ ಹೋದ ದಿವಾಕರನನ್ನು ಬಡಿಗೆಯಿಂದ ಹೊಡೆದು ಹತ್ಯೆಗೈದ ಆರೋಪಿಗಳು ದಿವಾಕರನ ಮೃತದೇಹವನ್ನು ಗೋಣಿಯಲ್ಲಿ ತುಂಬಿಸಿ ಕೆರೆಗೆ ಎಸೆದಿದ್ದು, ಆತನ ಬೈಕ್ ನ್ನು ಕೂಡ ಕೆರೆಗೆ ಎಸೆದಿದ್ದಾರೆ.

ಇನ್ನೂ ಚಿನ್ನ ತರಲು ಹೋದ ಮಗ ನಾಪತ್ತೆಯಾಗಿದ್ದಾನೆ ಎಂದು ದಿವಾಕರ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಮೃತದೇಹದಲ್ಲಿದ್ದ ಐಡಿ ಕಾರ್ಡ್‌ನಿಂದ ದಿವಾಕರ್‍ ನ ಗುರುತು ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿದ್ಯಾರ್ಥಿನಿಯ ಜೊತೆಗೆ ಶಾಲೆಯಲ್ಲಿ ಶಿಕ್ಷಕನಿಂದ ಅಸಭ್ಯ ವರ್ತನೆ: ವಿಡಿಯೋ ವೈರಲ್

ಮಗಳು ಮೊಬೈಲ್ ನಲ್ಲಿ ಕಾಲ ಕಳೆಯುತ್ತಾಳೆ ಎಂದು ಆರೋಪಿಸಿ ತಂದೆಯಿಂದಲೇ ಅತ್ಯಾಚಾರ!

ಬಿಜೆಪಿ – ಜೆಡಿಎಸ್​ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್​​ನ ಹಲವು ಶಾಸಕರೇ ಬಿಜೆಪಿ ಸಂಪರ್ಕದಲ್ಲಿದ್ದಾರೆ: ನಳಿನ್ ಕುಮಾರ್ ಕಟೀಲ್

ಇತ್ತೀಚಿನ ಸುದ್ದಿ