ಗಂಭೀರ ಸ್ಥಿತಿಯಲ್ಲಿರುವ ಯುವಕ: ಯುವಕನ ಪರಿಚಯವಿದ್ದವರು ಮಾಹಿತಿ ನೀಡಿ - Mahanayaka
6:03 PM Thursday 12 - December 2024

ಗಂಭೀರ ಸ್ಥಿತಿಯಲ್ಲಿರುವ ಯುವಕ: ಯುವಕನ ಪರಿಚಯವಿದ್ದವರು ಮಾಹಿತಿ ನೀಡಿ

udupi
06/10/2022

ಉಡುಪಿ: ಮುಕಾಂಬಿಕ ಭಜನಾ ಮಂದಿರ ಸನಿಹದ, ತೊಡಿನಲ್ಲಿ ಬಿದ್ದು ಸಿಲುಕಿಕೊಂಡಿದ್ದ ಅಪರಿಚಿತ ಯುವಕನನ್ನು ನಗರ ಪೊಲೀಸ್ ಠಾಣೆಯ ಪೊಲೀಸರು ರಕ್ಷಿಸಿರುವ ಘಟನೆ ಗುರುವಾರ ನಡೆದಿದೆ.

ಪೊಲೀಸರ ಕರೆಯ ಮೇರೆಗೆ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು, ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದಾರೆ. ಯುವಕನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಯುವಕನ ಬಳಿ ಗುರುತಿನ ಚೀಟಿ ಪತ್ತೆಯಾಗಿದ್ದು, ಅದರಲ್ಲಿ ವಿನೀಶ್ ಎಂ.ವಿ., ವಾಲಿಯಾ ವಿಥಿಲ್, ಕರಿಂಬಾಮ, ಪಣಿಯೂರ್, ಕಣ್ಣೂರು ವಿಳಾಸದ ಉಲ್ಲೇಖ ಇದೆ. ಸಂಬಂಧಿಕರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ