ಯುವಕನ್ನು ಬೆನ್ನಟ್ಟಿ ತಲವಾರು ದಾಳಿಗೆ ಯತ್ನ ವದಂತಿ: ಎನ್.ಶಶಿಕುಮಾರ್ ಸ್ಪಷ್ಟನೆ

ಮಂಗಳೂರು: ಯುವಕನೋರ್ವ ತನ್ನನ್ನು ಯಾರೋ ಬೆನ್ನಟ್ಟಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಘಟನೆ ಮಂಗಳೂರು ನಗರದ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಉಚ್ಚಿಲ ನಿವಾಸಿ ಕಿಶೋರ್ ವದಂತಿ ಹಬ್ಬಿಸಿದ ಆರೋಪಿಯಾಗಿದ್ದು, ಈತ ಇಂದು ಬೆಳಗ್ಗೆ ಕೆ.ಸಿ.ನಗರ ಮುಳ್ಳುಗುಡ್ಡೆ ಎಂಬಲ್ಲಿ ತನ್ನನ್ನು ಯಾರೋ ಬೆನ್ನಟ್ಟಿ ತಲವಾರು ದಾಳಿಗೆ ಯತ್ನಿಸಿದ್ದಾರೆ ಎಂದು ವದಂತಿ ಹಬ್ಬಿಸಿದ್ದ.
ಈ ಬಗ್ಗೆ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ, ತಾನು ಸುಮ್ಮನೆ ಹೇಳಿರುವುದಾಗಿ ತಿಳಿಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ತಲವಾರು ದಾಳಿ ಯತ್ನದಂತಹ ಯಾವುದೇ ಘಟನೆ ನಡೆದಿಲ್ಲ. ಸ್ಥಳಕ್ಕೆ ತಾನು ಭೇಟಿ ನೀಡಿ ವದಂತಿ ಹಬ್ಬಿಸಿದ ವ್ಯಕ್ತಿಯನ್ನು ವಿಚಾರಿಸಿದಾಗ, ತಾನು ಹಾಗೆ ಭಾವಿಸಿದ್ದಾಗಿಯೂ ಯಾರೂ ತನ್ನ ಮೇಲೆ ತಲವಾರು ದಾಳಿ ಮಾಡಿಲ್ಲ, ಬೆನ್ನಟ್ಟಿ ಬಂದಿಲ್ಲ ಎಂದು ಆತ ಒಪ್ಪಿಕೊಂಡಿದ್ದಾನೆ. ವದಂತಿ ಹಬ್ಬಿಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka