ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನ ರಕ್ಷಣೆಗೆ ಮುಂದಾಗಿದ್ದ ಯುವಕನನ್ನು ಥಳಿಸಿಕೊಂದ ಗುಂಪು! - Mahanayaka
11:30 AM Wednesday 5 - February 2025

ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನ ರಕ್ಷಣೆಗೆ ಮುಂದಾಗಿದ್ದ ಯುವಕನನ್ನು ಥಳಿಸಿಕೊಂದ ಗುಂಪು!

crime news
30/11/2021

ಅಸ್ಸಾಂ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನನ್ನು ರಕ್ಷಿಸಲು ಮುಂದಾಗಿದ್ದ ಯುವಕನನ್ನು ಥಳಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ಹಲ್ಲೆಯನ್ನು ತಡೆಯಲು ಹೋದ ಓರ್ವ ಪತ್ರಕರ್ತ ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ.

24 ವರ್ಷ ವಯಸ್ಸಿನ ಅನಿಮೇಶ್ ಭೂಯಾನ್ ಮೃತ ಯುವಕ ಎಂದು ಗುರುತಿಸಲಾಗಿದ್ದು, ಅಸ್ಸಾಂನ ಚರಿಯಾಲಿ ಎಂಬಲ್ಲಿ ರಸ್ತೆ ಅಪಘಾತವಾಗಿದ್ದು, ಪರಿಣಾಮವಾಗಿ ಓರ್ವ ಹಿರಿಯ ನಾಗರಿಕರಿಗೆ ಗಾಯವಾಗಿತ್ತು. ಅವರನ್ನು ರಕ್ಷಿಸಲು ಮುಂದಾಗುತ್ತಿದ್ದಂತೆಯೇ ಅಲ್ಲೇ ಇದ್ದ ಗುಂಪೊಂದು ಅನಿಮೇಶ್ ಭೂಯಾನ್ ಹಾಗೂ ಅವರ ಜೊತೆಗಿದ್ದ ಇಬ್ಬರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.

ಅನಿಮೇಶ್ ಹಾಗೂ ಇತರ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಯಿಂದ ಗಾಯಗೊಂಡಿದ್ದ ಮೂವರನ್ನು ಕೂಡ  ಪೊಲಿಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಈ ವೇಳೆ ಅನಿಮೇಶ್ ನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೊಂದು ವರದಿಯ ಪ್ರಕಾರ, ಪೊಲೀಸರ ಎದುರೇ ಈ ಮೂವರು ಯುವಕರನ್ನು ಥಳಿಸಲಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಇದೀಗ 10 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇನ್ನುಳಿದವರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಮೇಲೆ ರಾತ್ರಿಯಿಡೀ ಸಂಚರಿಸಿದ ವಾಹನಗಳು!

ಆಟೋಗೆ ಡಿಕ್ಕಿ ಹೊಡೆದ ಲಾರಿ: ಬಾಲಕನ ದಾರುಣ ಸಾವು, ಮೂವರ ಸ್ಥಿತಿ ಗಂಭೀರ

ಹೃದಯಾಘಾತವಾದ ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ವೈದ್ಯರಿಗೂ ಹೃದಯಾಘಾತ!

ಬಿಜೆಪಿ ಸಂವಿಧಾನ ವಿರೋಧಿ ಅಲ್ಲ ಎಂದು ನಾನು ನಿರೂಪಿಸುತ್ತೇನೆ | ಛಲವಾದಿ ನಾರಾಯಣಸ್ವಾಮಿ

ಒಮಿಕ್ರಾನ್: ಸಾವಿನ ಮೆರವಣಿಗೆ ಮತ್ತೆ ಬೇಡ, ಯಾರೂ ಎಚ್ಚರ ತಪ್ಪುವುದು ಬೇಡ | ಹೆಚ್.ಡಿ.ಕುಮಾರಸ್ವಾಮಿ

ಶಾಕ್ ನೀಡಿದ ಜಿಯೋ: ಏರ್ಟೆಲ್ ವೊಡಾಫೋನ್ ಬಳಿಕ ಜಿಯೋ ರೀಚಾರ್ಜ್ ದರ ಏರಿಕೆ

 

ಇತ್ತೀಚಿನ ಸುದ್ದಿ