ಯುವಕರ ಕಾಟ ತಾಳಲಾರದೇ ಲಕ್ಕಿ ಡ್ರಾದಲ್ಲಿ ವರನ ಆಯ್ಕೆ | ಒಬ್ಬಳಿಗೆ ಕ್ಯೂ ನಿಂತದ್ದೆಷ್ಟು ಮಂದಿ ಗೊತ್ತಾ?
ರಾಮ್ ಪುರ್: ಸ್ವಯಂವರ ಎನ್ನುವುದನ್ನು ಕೇಳಿದ್ದೇವೆ. ಆದರೆ ಲಕ್ಕಿ ಡ್ರಾ ವರ ಅಂತ ಯಾರು ಕೇಳಿರಲಿಕ್ಕಿಲ್ಲ. ಆದರೆ ಯಾವಾಗಲೂ ಅಚ್ಚರಿಯ ಸುದ್ದಿಗಳಿಗೆ ಹೆಸರಾಗುತ್ತಿರುವ ಉತ್ತರಪ್ರದೇಶದಲ್ಲೊಂದು ಇಂತಹ ಘಟನೆ ನಡೆದಿದೆ.
ನಾಲ್ವರು ಯುವಕರು ಒಂದೇ ಯುವತಿಯನ್ನು ಇಷ್ಟಪಟ್ಟಿದ್ದಾರೆ. ಇದರಿಂದಾಗಿ ವಧುವನ್ನು ಯಾರಿಗೆ ಮದುವೆ ಮಾಡಿಕೊಡುವುದು ಎನ್ನುವ ಗೊಂದಲ ಸೃಷ್ಟಿಯಾಗಿದೆ. ಈ ನಡುವೆ ಓರ್ವ ಯುವಕ, ವಧುವನ್ನು ಅಪಹರಿಸಿ ಹಳ್ಳಿಯೊಂದರಲ್ಲಿ ಬಚ್ಚಿಟ್ಟಿದ್ದಾನೆ. ಈ ವಿಚಾರ ಬಹಿರಂಗವಾಗಿದ್ದರಿಂದ ಮತ್ತೆ ವಧುವನ್ನು ಮತ್ತೆ ಯುವತಿಯ ಹಳ್ಳಿಯಾದ ರಾಂಪುರಕ್ಕೆ ಕರೆತರಲಾಗಿದೆ.
ಇಷ್ಟಾದರೂ ಈ ನಾಲ್ವರು ಯುವಕರು ಓರ್ವಳು ಯುವತಿಗಾಗಿ ಬಡಿದಾಡುವುದು ನಿಲ್ಲಲಿಲ್ಲ. ಈ ವಿಚಾರ ಕೊನೆಗೆ ಪಂಚಾಯಿತಿಯ ಮೆಟ್ಟಿಲೇರಿತು. ಪಂಚಾಯತಿ ಎಂದರೆ, ಚಿತ್ರ ವಿಚಿತ್ರ ತೀರ್ಪು ಕೊಡುವ ಜಾಗ ಎನ್ನುವುದು ಜಗಜ್ಜಾಹಿರಾಗಿರುವ ವಿಚಾರವಾಗಿದೆ. ಈ ಪ್ರಕರಣ ಕೂಡ ಹಾಗೆಯೇ ಆಗಿದೆ.
ಮೂರು ದಿನಗಳ ಕಾಲ ಪಂಚಾಯತಿಯಲ್ಲಿ ಚರ್ಚೆಯಾದ ಬಳಿಕ ಅಂತಿಮವಾಗಿ ಯುವತಿಯನ್ನು ಲಕ್ಕಿ ಡ್ರಾಕ್ಕೆ ಇಡಲಾಗಿದ್ದು, ನಾಲ್ಕು ಸ್ಲಿಪ್ ಗಳಲ್ಲಿ ನಾಲ್ಕು ಜನ ಯುವಕರ ಹೆಸರು ಬರೆದು ಒಂದು ಮಗುವಿನಿಂದ ಸ್ಲಿಮ್ ಆರಿಸಲಾಗಿದ್ದು, ಈ ಮೂಲಕ ಓರ್ವ ಯುವಕನಿಗೆ ಯುವತಿಯ ಜೊತೆಗೆ ವಿವಾಹ ಮಾಡಿಸಲಾಗಿದೆ. ಇದು ಇನ್ನೇನು ಸಮಸ್ಯೆಗೆ ಕಾರಣವಾಗುತ್ತದೆ ಎನ್ನುವುದು ತಿಳಿದು ಬಂದಿಲ್ಲ.