ಯುವತಿಯ ಖಾಸಗಿ ಫೋಟೋ ಆಕೆಯ ತಂದೆಗೆ ಕಳುಹಿಸಿ ಬೆದರಿಕೆ: ರೌಡಿಶೀಟರ್ ಬಂಧನ
ಬೆಂಗಳೂರು: ಯುವತಿಯೋರ್ವಳ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ, ಆಕೆಯ ತಂದೆಗೆ ಫೋಟೋಗಳನ್ನು ಕಳುಹಿಸಿದ್ದ ರೌಡಿಶೀಟರ್‌ನ್ನು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಹುಳಿಮಾವು ರೌಡಿಶೀಟರ್ ನಂದೀಶ್ ಬಂಧಿತ ಆರೋಪಿ. ಈತ ಯುವಕನೊಬ್ಬನ ಬಳಿಯಿಂದ ಯುವತಿಯ ಖಾಸಗಿ ಫೋಟೋ ಪಡೆದಿದ್ದ. ಆ ಫೋಟೋಗಳನ್ನು ಇಟ್ಟುಕೊಂಡು ಯುವತಿಗೆ ಬೆದರಿಕೆ ಹಾಕುತ್ತಿದ್ದ. ಆಕೆಯ ತಂದೆಗೂ ಫೋಟೋ ಕಳುಹಿಸಿ ಬೆದರಿಕೆಯೊಡ್ಡಿದ್ದ. ಇದರಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಈ ಘಟನೆ ಸಂಬಂಧ ಯುವತಿಯ ದೂರು ಆಧರಿಸಿ ರೌಡಿಶೀಟರ್ ನಂದೀಶ್ನನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಭಜರಂಗದಳದ ಕಾರ್ಯಕರ್ತನ ಬರ್ಬರ ಕೊಲೆ; ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ; ಶಾಲಾ-ಕಾಲೇಜುಗಳಿಗೆ ರಜೆ
ಬಹಿರಂಗ ಸಮಾವೇಶದಲ್ಲಿಯೇ ಬಿಜೆಪಿ ಮುಖಂಡನ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ
ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣ: ಓರ್ವ ಆರೋಪಿ ವಶಕ್ಕೆ
ಮಾರಕಾಸ್ತ್ರಗಳಿಂದ ಕೊಚ್ಚಿ ಬಜರಂಗದಳದ ಕಾರ್ಯಕರ್ತನ ಬರ್ಬರ ಹತ್ಯೆ!
ವಡಾಪಾವ್ ತಿಂದು ಬಿಲ್ ಪಾವತಿಸದೇ ತೆರಳಿದ್ದ ಕೇಂದ್ರ ಸಚಿವರಿಗೆ ತೀವ್ರ ಮುಜುಗರ!