ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಣ: ಯುವತಿ ಕಿರುಚಿದಾಗ ಆರೋಪಿ ಪರಾರಿ

ullala news
18/07/2021

ಉಳ್ಳಾಲ: ಯುವತಿಯೋರ್ವಳು ಸ್ನಾನ ಮಾಡುತ್ತಿದ್ದ ವೇಳೆ ದುಷ್ಕರ್ಮಿಯೋರ್ವ ಕ್ಯಾಮರಾದಲ್ಲಿ ಚಿತ್ರೀಕರಿಸಿದ ಘಟನೆ  ಕೋಟೆಕಾರು ಮಾಡೂರು ಬಳಿಯಲ್ಲಿ ಶನಿವಾರ ನಡೆದಿದೆ.

ಯುವತಿ ಬಾತ್ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಚಾನಕ್ ಆಗಿ ಕಿಟಕಿಯ ಕಡೆ ನೋಡಿದ್ದು, ಈ ವೇಳೆ ಕಿಟಕಿ ಬಳಿಯಲ್ಲಿ ಮೊಬೈಲ್ ವೊಂದು ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ಯುವತಿ ಜೋರಾಗಿ ಕಿರುಚಿದ್ದಾಳೆ. ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ತಕ್ಷಣವೇ ಯುವತಿಯ ತಾಯಿ ಮನೆಯಿಂದ ಹೊರ ಬಂದು ನೋಡಿದಾಗ ಬಾತ್ ರೂಮ್  ನ ಕಿಟಕಿ ಬಳಿ ಏರಲು ಬೆಂಚೊಂದನ್ನು ಇಟ್ಟಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಘಟನೆ ಸಂಬಂಧ ಉಳ್ಳಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದ ಪೊಲೀಸರು!

ನಟಿಯ ಮುಖವನ್ನು ಎಡಿಟ್ ಮಾಡಿ ಅಶ್ಲೀಲ ವಿಡಿಯೋ ಹರಿಯಬಿಟ್ಟ ಪಾಪಿಗಳು

ಮಹಿಳೆಯನ್ನು ಅಪಹರಿಸಿ ಲಾಡ್ಜ್ ನಲ್ಲಿ ಕ್ರೂರ ಲೈಂಗಿಕ ಹಿಂಸೆ ನೀಡಿದ ಗ್ಯಾಂಗ್ | ಬೆಚ್ಚಿಬೀಳಿಸಿದ ಘಟನೆ

ಲೋನ್ ಬೇಕಾದ್ರೆ ಲೈಂಗಿಕ ಆಸೆ ತೀರಿಸ್ಬೇಕು: ವಿಡಿಯೋ ವೈರಲ್ ಬಳಿಕ ಬಯಲಾಯ್ತು ಬ್ಯಾಂಕ್ ಮ್ಯಾನೇಜರ್ ನ ಅಸಲಿ ಮುಖ

ಇತ್ತೀಚಿನ ಸುದ್ದಿ

Exit mobile version