ಯುವತಿಯನ್ನು ಆಕರ್ಷಿಸಲು ಪಿಸ್ತೂಲ್ ಖರೀದಿಸಿದ ಯುವಕ | ಆದರೆ ನಡೆದದ್ದೇ ಬೇರೆ! - Mahanayaka

ಯುವತಿಯನ್ನು ಆಕರ್ಷಿಸಲು ಪಿಸ್ತೂಲ್ ಖರೀದಿಸಿದ ಯುವಕ | ಆದರೆ ನಡೆದದ್ದೇ ಬೇರೆ!

pistol
08/07/2021

ಧಿಮಾಪುರ: ಯುವತಿಯ ಗಮನ ಸೆಳೆಯಲು  ಯುವಕನೋರ್ವ ಪಿಸ್ತೂಲ್ ಖರೀದಿಸಿದ್ದು, ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.  ತನಗೆ ಇಷ್ಟವಾಗಿದ್ದ ಯುವತಿಯನ್ನು ಹೀರೋಯಿಸಂ ತೋರಿಸಿ ಬಲೆಗೆ ಬೀಳಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

ನಾಗಲ್ಯಾಂಡ್ ರಾಜ್ಯದ ಧಿಮಾಪುರ ನಗರದಲ್ಲಿ ಈ ಘಟನೆ ನಡೆದಿದ್ದು,  25 ವರ್ಷ ವಯಸ್ಸಿನ ಟೋರಿನ್ ಎಂಬ ಯುವಕ ಬಂಧಿತನಾಗಿದ್ದು,  ಧಿಮಾಪುರದ ಪಡುಂಪುರಿ ಬಡಾವಣೆಯಲ್ಲಿ ಟೋರಿನ್ ವಾಸವಾಗಿದ್ದು, ಇದೇ ಬಡಾವಣೆಯ ಯುವತಿಯ ಮೇಲೆ ಈತನಿಗೆ ಪ್ರೀತಿ ಹುಟ್ಟಿತ್ತು.

ಯುವತಿಯ ಗಮನ ಸೆಳೆಯುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ ಆತನಿಗೆ ಈ ಕತರ್ನಾಕ್ ಪ್ಲಾನ್ ತಲೆಗೆ ಬಂದು ಕುಳಿತಿದೆ. ಪಿಸ್ತೂಲ್ ಹಿಡಿದುಕೊಂಡು ಹೀರೋಯಿಸಂ ತೋರಿಸಿದರೆ, ಯುವತಿ ಬಲೆಗೆ ಬೀಳಬಹುದು ಅಂದುಕೊಂಡು ಪಿಸ್ತೂಲ್ ಖರೀದಿಗೆ ಮುಂದಾಗಿದ್ದಾನೆ.

ತನ್ನ ಗೆಳೆಯರ ಮೂಲಕ ಹೇಗೋ ಪಿಸ್ತೂಲ್ ತರಿಸಿಕೊಂಡ ಟೋರಿನ್, ಯುವತಿಯ ಎದುರು  ಪಿಸ್ತೂಲನ್ನು ಹೇಗೆ ಪ್ರದರ್ಶಿಸಿ ಹೀರೋಯಿಸಂ ತೋರಿಸುವುದು ಎಂದು ಯೋಚನೆ ಮಾಡುತ್ತಿರುವಾಗಲೇ,  ಈತ ಪಿಸ್ತೂಲ್ ಖರೀದಿಸಿದ್ದಾನೆ ಎನ್ನುವ ವಿಚಾರವನ್ನು ಯಾರೋ ಪೊಲೀಸರಿಗೆ ತಲುಪಿಸಿದ್ದಾರೆ ತಕ್ಷಣವೇ ಟೋರಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನೂ ಈತನ ಮೇಲೆ ಪಿಸ್ತೂಲ್ ಇರೋದ್ರಿಂದ ಈತ ಭಯೋತ್ಪಾದಕನಾಗಿರಬಹುದು ಎಂದು ಕೂಡ ಪೊಲೀಸರು ಅನುಮಾನಪಟ್ಟಿದ್ದರಂತೆ.  ಆದರೆ ಪೊಲೀಸರು ವಿಚಾರಣೆ ನಡೆಸಿದಾಗ, ಯುವತಿಯನ್ನು ಪ್ರೀತಿಸಲು ಆಕರ್ಷಿಸಲು ಪಿಸ್ತೂಲ್ ಖರೀದಿರುವುದಾಗಿ ಆತ ಹೇಳಿದ್ದಾನೆ.

ಇತ್ತೀಚಿನ ಸುದ್ದಿ