ಯುವತಿಯನ್ನು ದೇವರ ಹೆಸರಿನ ವೇಶ್ಯಾವಾಟಿಗೆಗೆ ನೂಕಲು ಮುಂದಾದ ಪೋಷಕರು! - Mahanayaka
6:12 AM Saturday 21 - September 2024

ಯುವತಿಯನ್ನು ದೇವರ ಹೆಸರಿನ ವೇಶ್ಯಾವಾಟಿಗೆಗೆ ನೂಕಲು ಮುಂದಾದ ಪೋಷಕರು!

devadasi
15/06/2021

ರಾಯಚೂರು: ಯುವತಿಯೋರ್ವಳನ್ನು ದೇವರ ಹೆಸರಿನ ವೇಶ್ಯಾವಾಟಿಕೆ ದೇವದಾಸಿ ಪದ್ಧತಿಗೆ ನೂಕಲು ಪೋಷಕರೇ ಮುಂದಾಗಿರುವ ಘಟನೆ ನಡೆದಿದ್ದು, ಇದೀಗ ತನ್ನ ದುಷ್ಟ ಪೋಷಕರ ವಿರುದ್ಧ ಯುವತಿ ದೂರು ನೀಡಿದ್ದಾಳೆ.

21 ವರ್ಷ ವಯಸ್ಸಿನ ಯುವತಿಯನ್ನು ಆಕೆಯ ಅಕ್ಕನ ಗಂಡನ ಜೊತೆಗೆ ಮದುವೆ ಮಾಡಲು ಆರಂಭದಲ್ಲಿ ಪೋಷಕರು ಮುಂದಾಗಿದ್ದಾರೆ. ಇದನ್ನು ಆಕೆ ವಿರೋಧಿಸಿದಾಗ,  ಆಕೆಯನ್ನು ದೇವದಾಸಿ ಮಾಡಲು ಪೋಷಕರು ಮುಂದಾಗಿದ್ದಾರೆ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ ಎಂದು ವರದಿಯಾಗಿದೆ.

ಪೋಷಕರ ವರ್ತನೆಯಿಂದ ನೊಂದ ಯುವತಿ ತನ್ನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದು,  ಜಾಲಹಳ್ಳಿ ಠಾಣಾ ಪೊಲೀಸಿಗೆ ದೂರ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಯುವತಿ ದೇವದುರ್ಗದ ಮಹಿಳಾ ಪುನರ್ವಸತಿ ಆಶ್ರಯ ಪಡೆದುಕೊಂಡಿದ್ದಾರೆನ್ನಲಾಗಿದೆ.


Provided by

ಹಿಂದಿನ ಕಾಲದಲ್ಲಿ ದೇವರ ಹೆಸರಿನಲ್ಲಿ ದೇವರ ಸೇವೆಯ ಹೆಸರಿನಲ್ಲಿ ಯುವತಿಯರನ್ನು ದೇವಸ್ಥಾನಕ್ಕೆ ಬಿಡಲಾಗುತ್ತಿತ್ತು. ಆದರೆ, ಆ ಬಳಿಕ ಆ ಯುವತಿಯ ಮೇಲೆ ದೇವಸ್ಥಾನಗಳಲ್ಲಿಯೇ ಅತ್ಯಾಚಾರಗಳು ನಡೆಯುತ್ತಿದ್ದವು.

1934 ರಲ್ಲಿ ಭಾರತೀಯ ದಂಡವಿಧಾನದ 373 ಮತ್ತು 375 ರ ವಿಧಿಗಳನ್ನು ದೇವದಾಸಿ ಪದ್ಧತಿಯ ಮೇಲು ಅನ್ವಯಿಸುವ ದಿಶೆಯಲ್ಲಿ ಸಂಶೋಧನೆ ನಡೆಸಿತು. 1937 ರಲ್ಲಿ ಮದ್ರಾಸ್ ವಿಧಾನ ಪರಿಷತ್ತು ದೇವದಾಸಿ ಪದ್ಧತಿಯನ್ನು ನಿರ್ಮೂಲನ ಮಾಡಲು ಸರ್ವಾನುಮತದಿಂದ ವಿಧೇಯಕವೊಂದನ್ನು ಅಂಗೀಕರಿಸಿತು. ಅದರಲ್ಲಿ ಗೌರವಾನ್ವಿತ ದೇವದಾಸಿಯರನ್ನು ದಾಸ್ಯದಿಂದ ಮುಕ್ತಗೊಳಿಸಡುವ ಸಲಹೆ ನೀಡಲಾಯಿತು.

ಆ ಬಳಿಕ ಹಿಂದೂ ದೇವಾಲಯಗಳಲ್ಲಿ ಸ್ತ್ರೀಯರನ್ನು ಸೇವೆಗಾಗಿ ಅರ್ಪಿಸುವ ಪದ್ಧತಿಯನ್ನು ಕಾನೂನಿನಿಂದ ಕೊನೆಗೊಳಿಸುವ ಕ್ರಮವನ್ನು ಕೈಗೊಳ್ಳಲಾಯಿತು. ಅಲ್ಲದೆ ದೇವದಾಸಿಯರಾಗಿ ಕೆಲಸ ಮಾಡುತ್ತಿದ್ದ ಸ್ತ್ರೀಯರಿಗೆ ವಿಧಿಸಮ್ಮತ ವಿವಾಹಕ್ಕೆ ವ್ಯವಸ್ಥೆಗಳನ್ನು ಏರ್ಪಡಿಸಿತು. ಆದರೆ ಇಂದಿಗೂ ಇಂತಹ ಪದ್ಧತಿಗಳು ಕೆಲವೆಡೆಗಳಲ್ಲಿ ತಲೆ ಎತ್ತುತ್ತಿರುವುದು ಆತಂಕಕಾರಿಯಾಗಿದೆ.

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ