ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ಯುವತಿಯ ಅನುಮಾನಾಸ್ಪದ ಸಾವು: ಟೆಕ್ಕಿ ಪೊಲೀಸ್ ವಶಕ್ಕೆ
ಬೆಂಗಳೂರು: ನಗರದ ಬೆಳ್ಳಂದೂರಿನ ಟೆಕ್ಕಿಯೊಬ್ಬರ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಘಟನೆಗೆ ಸಂಧಿಸಿದಂತೆ ಇದೀಗ ಟೆಕ್ಕಿ ವಿವೇಕ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಟೆಕ್ಕಿ ವಿವೇಕ್ ರೆಡ್ಡಿ ಎಂಬಾತನ ಮನೆಯಲ್ಲಿ ಮೃತ ಕವಿತಾ ಕೆಲಸ ಮಾಡುತ್ತಿದ್ದು, ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಜನವರಿ 1ರಂದು ಕವಿತಾರ ಪೋಷಕರಿಗೆ ಕರೆ ಮಾಡಿದ್ದ ವಿವೇಕ್, ನಿಮ್ಮ ಮಗಳು ಸ್ನಾನದ ಕೋಣೆಯ ಶವರ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ ಎನ್ನಲಾಗಿದೆ.
ವಿವೇಕ್ ಕರೆ ಮಾಡಿದ ತಕ್ಷಣವೇ ಬೆಳ್ಳಂದೂರಿನ ಫ್ಲಾಟ್ ಗೆ ಪೋಷಕರು ತೆರಳಿ ನೋಡಿದಾಗ ಕವಿತಾ ಮೃತದೇಹ ಅರೆ ವಿವಸ್ತ್ರ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಕವಿತಾಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಕಾರಣಗಳಿರಲಿಲ್ಲ ಎಂದು ಪೋಷಕರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕವಿತಾ ಸಾವನ್ನಪ್ಪುವ ಮೊದಲು ಪೋಷಕರಿಗೆ ಕರೆ ಮಾಡಿದ್ದು, ಟೆಕ್ಕಿ ಮನೆಗೆ ಹೊಸ ವರ್ಷಾಚರಣೆಗೆ ಇಬ್ಬರು ಪುರುಷ ಗೆಸ್ಟ್ಗಳು ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಳು. ಘಟನೆ ದಿನ ಹಿಂದಿನ ರಾತ್ರಿ ಟೆಕ್ಕಿ ಫ್ಲಾಟ್ಗೆ ಬಂದಿದ್ದ ಗೆಸ್ಟ್ಗಳು ಯಾರು..? ಎಂದು ಯುವತಿ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೊವಿಡ್ ಪ್ರಕರಣ ನಿಯಂತ್ರಣ ಮೀರಿದರೆ ಲಾಕ್ ಡೌನ್? | ವಾರಾಂತ್ಯದೊಳಗೆ ಅಂತಿಮ ನಿರ್ಧಾರ!
ಕರ್ನಾಟಕದಲ್ಲಿ ಹೊಸ 10 ಒಮಿಕ್ರಾನ್ ಪ್ರಕರಣಗಳು ಪತ್ತೆ
ಏಕಾಏಕಿ ಆ್ಯಕ್ಟಿವ್ ಆದ ಸುಶಾಂತ್ ಸಿಂಗ್ ಫೇಸ್ ಬುಕ್ ಖಾತೆ | ಅಭಿಮಾನಿಗಳಿಗೆ ಶಾಕ್
ಗರ್ಭಿಣಿ ಸಂಜನಾ ಅವರ ಸಂತಸದ ಸಂದರ್ಭದಲ್ಲಿಯೂ ನೋಯಿಸಿದ ಆ ನ್ಯೂಸ್ ಚಾನೆಲ್!