ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ ಜಮೀರ್ ಖಾನ್ ಪುತ್ರನ ಮೊದಲ ಸಿನಿಮಾ!
ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಾಯಕ ನಟನಾಗಿ ನಟಿಸಿರುವ ‘ಬನಾರಸ್’ ಚಿತ್ರ ಇದೀಗ ಭಾರೀ ಸುದ್ದಿಯಲ್ಲಿದ್ದು, ಝೈದ್ ಖಾನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಂತೆಯೇ ದಾಖಲೆ ಸೃಷ್ಟಿಸಿದ್ದಾರೆ.
ಹೆಸರಾಂತ ನಿರ್ದೇಶಕ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರವುದಲ್ಲಿ ನಾಯಕ ನಟನಾಗಿ ಝೈದ್ ಖಾನ್ ಅಭಿನಯಿಸಿದ್ದು, ನಾಯಕಿಯಾಗಿ ಕರಾವಳಿಯ ಸೊನಲ್ ಮೊಂಥೆರೋ ನಟಿಸಿದ್ದಾರೆ. ಬಿಡುಗಡೆಯ ಸಮೀಪದಲ್ಲಿರುವ ಬನಾರಸ್ ಸಿನಿಮಾ ಭಾರೀ ಸದ್ದು ಮಾಡುತ್ತಿದೆ.
ಬನಾರಸ್ ಚಿತ್ರದ ಆಡಿಯೋ ರೈಟ್ಸ್ ನ್ನು ದೇಶದ ಅತ್ಯುನ್ನತ ಆಡಿಯೋ ಕಂಪೆನಿ ಲಹರಿ ಹಾಗೂ ಟಿ-ಸೀರೀಸ್ ಜಂಟಿಯಾಗಿ ಬರೋಬ್ಬರಿ 3.5 ಕೋ.ರೂ. ದಾಖಲೆ ಮೊತ್ತ ನೀಡಿ ಖರೀದಿಸಿದೆ. ಬನಾರಸ್ ಪ್ಯಾನ್ ಇಂಡಿಯಾ ಸಿನಿಮವಾಗಿದ್ದು, ವಿಭಿನ್ನ ಪ್ರೇಮ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka