ಬೀದಿ ಬದಿ ವ್ಯಾಪಾರಕ್ಕೂ ಕಾಲಿಟ್ಟ ಸ್ವಿಗ್ಗಿ, ಝೊಮೆಟೋ | ಹೊಸ ಯೋಜನೆಗೆ ಸಹಿ ಹಾಕಿದ ಮೋದಿ ಸರ್ಕಾರದ
ನವದೆಹಲಿ: ರಸ್ತೆ ಬದಿ ಆಹಾರ ಮಾರಾಟ ಮಾಡುವವರಿಗೆ ಮೋದಿ ಸರ್ಕಾರ ಹೊಸ ಆಫರ್ ನೀಡಿದ್ದು, ಪ್ರಧಾನ ಮಂತ್ರಿ ಬೀದಿ ಮಾರಾಟಗಾರರ ಸ್ವಾವಲಂಬಿ ನಿಧಿ (ಪಿ ಎಂ ಸ್ವನಿಧಿ ಯೋಜನೆ) ಆರಂಭಿಸಿದೆ.
ನಗರಾಭಿವೃದ್ಧಿ ಸಚಿವಾಲಯವು ಆನ್‌ಲೈನ್ ಆಹಾರ ಮಾರಾಟ ಕಂಪನಿಯಾದ ಜೊಮಾಟೊ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ ಸ್ವಿಗ್ಗಿ ಹಾಗೂ ಝೋಮೆಟೋ ಜೊತೆಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ.
ಇದರ ಪ್ರಕಾರ ಬೀದಿ ಬದಿ ವ್ಯಾಪಾರಿಗಳು ಆಹಾರ ಮತ್ತು ಪಾನೀಯಕ್ಕಾಗಿ ಆನ್‌ಲೈನ್ ಆದೇಶಗಳನ್ನು ತೆಗೆದುಕೊಂಡ ನಂತರ ಮನೆಗೆ ಡಿಲೆವರಿ ಮಾಡಬಹುದು. ಇದಕ್ಕಾಗಿ ಆರು ನಗರಗಳಲ್ಲಿ 300 ಆಹಾರ ಮಾರಾಟಗಾರರಿಗೆ ತರಬೇತಿ ನೀಡುವ ಮೂಲಕ ಯೋಜನೆಯನ್ನು ಪ್ರಾರಂಭಿಸುವುದಾಗಿ ಜೊಮಾಟೊ ತಿಳಿಸಿದೆ.
ಪಿಎಂ ಸ್ವನಿಧಿ ಯೋಜನೆಯಡಿ ಮಾರಾಟಗಾರರು 10,000 ರೂಪಾಯಿಗಳ ಸಾಲವನ್ನು ವರ್ಕಿಂಗ್ ಕ್ಯಾಪಿಟಲ್ ಸಾಲವಾಗಿ ತೆಗೆದುಕೊಳ್ಳಬಹುದು. ಇದನ್ನು 1 ವರ್ಷದಲ್ಲಿ ಮಾಸಿಕ ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ. ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿಸಿದರೆ, ತ್ರೈಮಾಸಿಕ ಆಧಾರದ ಮೇಲೆ ವಾರ್ಷಿಕವಾಗಿ ಶೇಕಡಾ 7ರಷ್ಟು ಸಬ್ಸಿಡಿಯನ್ನು ಮಾರಾಟಗಾರರ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ ಎಂದು ವರದಿಯಾಗಿದೆ.