ಮೃಗಾಲಯದ ಮುಂದೆ ಕಾಣಿಸಿಕೊಂಡ ವಿಚಿತ್ರ ಜೀವಿ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಟೆಕ್ಸಾಸ್: ಮೃಗಾಲಯದ ಮುಂದೆ ವಿಚಿತ್ರ ಜೀವಿಯೊಂದು ಪತ್ತೆಯಾಗಿರುವ ಘಟನೆ ಟೆಕ್ಸಾಸ್‌ನ ಅಮರಿಲ್ಲೊ ಮೃಗಾಲಯದ ಬಳಿ ನಡೆದಿದ್ದು, ಸಿಸಿ ಟಿವಿಯಲ್ಲಿ ಪತ್ತೆಯಾದ ವಿಚಿತ್ರ ಜೀವಿಯನ್ನು ಕಂಡು ಮೃಗಾಲಯದ ಸಿಬ್ಬಂದಿ ಅಚ್ಚರಿಗೀಡಾಗಿದ್ದಾರೆ.
ಮೇ 21ರಂದು ಮಧ್ಯರಾತ್ರಿ 1:25ಕ್ಕೆ ಮೃಗಾಲಯದ ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಎರಡು ಕಾಲಿನಲ್ಲಿ ನಡೆಯುತ್ತಿರುವ ಈ ಜೀವಿ, ಕಪ್ಪು ಕಿವಿಗಳನ್ನು ಹೊಂದಿತ್ತು. ಪತ್ತೆಯಾದ ಆಕೃತಿ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಆಕೃತಿ ಪತ್ತೆಯಾದ ತಕ್ಷಣವೇ ಇದು ಸ್ಥಳೀಯರು ಯಾರಾದರೂ ಮಾಡಿದ ಕುಚೇಷ್ಠೆಯೇ? ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದವು. ಆದರೆ, ಆ ರೀತಿಯ ಯಾವುದೇ ಘಟನೆ ಇದಲ್ಲ ಎನ್ನಲಾಗಿದೆ.
ಇನ್ನೂ ಸ್ಥಳೀಯವಾಗಿ ಯಾವುದೇ ವಿಚಿತ್ರ ಪ್ರಾಣಿಗಳನ್ನು ಯಾರೂ ನೋಡಿಲ್ಲ. ಯಾರ ಮೇಲೆಯೂ ಅನುಮಾನಾಸ್ಪದ ಪ್ರಾಣಿಗಳು ದಾಳಿ ನಡೆಸಿಲ್ಲ ಎಂದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪಾರ್ಕ್ ನ ನಿರ್ದೇಶಕರು ತಿಳಿಸಿದ್ದಾರೆ.
ಅಮರಿಲ್ಲೊ ನಗರದ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಚಿತ್ರವನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪ್ರವಾದಿ ವಿರುದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ: ಗಾಯಗೊಂಡಿದ್ದ ಇಬ್ಬರು ಸಾವು
ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಗಿಡುಗನನ್ನು ರಕ್ಷಿಸಲು ಯತ್ನಿಸಿದವರಿಗೆ ಕಾರು ಡಿಕ್ಕಿ: ಇಬ್ಬರು ಸಾವು
ಪುತ್ರಿಯ ಬೀದಿ ರಂಪಾಟಕ್ಕೆ ಅರವಿಂದ್ ಲಿಂಬಾವಳಿ ಹೇಳಿದ್ದೇನು?
ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಸೇತುವೆ: ಮೇಯರ್ ಸಹಿತ 8 ಮಂದಿಗೆ ಗಾಯ!