ಗಂಡ, ಹೆಂಡತಿ ನಡುವೆ ರಾಜಿ ಪಂಚಾಯಿತಿ ವೇಳೆ ಮನ ಬಂದಂತೆ ಗುಂಡು ಹಾರಿಸಿದ ನಿವೃತ್ತ ಸೈನಿಕ | ಇಬ್ಬರು ಸಾವು - Mahanayaka

ಗಂಡ, ಹೆಂಡತಿ ನಡುವೆ ರಾಜಿ ಪಂಚಾಯಿತಿ ವೇಳೆ ಮನ ಬಂದಂತೆ ಗುಂಡು ಹಾರಿಸಿದ ನಿವೃತ್ತ ಸೈನಿಕ | ಇಬ್ಬರು ಸಾವು

uttar pradesh
03/09/2021

ಉತ್ತರಪ್ರದೇಶ: ಗಂಡ ಹೆಂಡತಿಯ ನಡುವಿನ ಜಗಳದ ಬಗ್ಗೆ ರಾಜಿ ಪಂಚಾಯಿತಿ ನಡೆಸುತ್ತಿದ್ದ ವೇಳೆ ಮಾತಿನ ಚಕಮಕಿ ನಡೆದು, ನಿವೃತ್ತ ಸೈನಿಕನೋರ್ವ ಮನಬಂದಂತೆ ಗುಂಡು ಹಾರಿಸಿ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ  ಜಸ್ವಂತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಬಸ್ತಿ ಎಂಬಲ್ಲಿ ಗುರುವಾರ ನಡೆದಿದೆ.


Provided by

ನಿತಿನ್ ಯಾದವ್ ಹಾಗೂ ಆತನ ಪತ್ನಿಯ ನಡುವೆ ಮನಸ್ತಾಪವಿದ್ದು, ಮನಸ್ತಾಪವನ್ನು ಪರಿಹರಿಸಲು ನೇಹಾ ಅವರ ಚಿಕ್ಕಪ್ಪ ರಾಮ್ ಶಂಕರ್, ಆಕೆಯ ಸೋದರ ಮಾವ ಕೈಲಾಶ್ ಚಂದ್ರ ಯಾದವ್ ಮತ್ತಿತರರು ಗುರವಾರ ನ್ಯೂಬಸ್ತಿಯಲ್ಲಿರುವ ನಿತಿನ ಯಾದವ್ ಮನೆಗೆ ಆಗಮಿಸಿದ್ದರು.

ರಾಜಿ ಪಂಚಾಯತಿ ಮಾತಿನ ಚಕಮಕಿಗೆ ತಿರುಗಿದ್ದು, ಈ ವೇಳೆ ನಿತಿನ್ ನ ತಂದೆ, ನಿವೃತ್ತ ಸೈನಿಕ  ತನ್ನ ಪರವಾನಗಿಯ ರೈಫಲ್ ನಿಂದ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ  ನೇಹಾ ಅವರ ಚಿಕ್ಕಪ್ಪ ರಾಮ್ ಶಂಕರ್ ಹಾಗೂ ಸೋದರ ಮಾವ ಕೈಲಾಶ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ, ದಾರಿ ಮಧ್ಯೆ ಅವರು ಮೃತಪಟ್ಟರು ಎಂದು  ಇಟಾವಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಳು…

ಭಾಷಣದ ವೇಳೆ ಊಟಕ್ಕೆ ಮುಗಿಬಿದ್ದ ಮಹಿಳಾ ಕಾರ್ಯಕರ್ತೆಯರು | ಬೇಸರ ವ್ಯಕ್ತಪಡಿಸಿದ ದೇವೇಗೌಡರು

ಭಾರತದ ಬಡ ಮುಸ್ಲಿಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು | ಓವೈಸಿ ಕಿಡಿ

ಚಿರುಪುತ್ರನ ಹೆಸರು ಬಹಿರಂಗಗೊಳಿಸಿದ ಮೇಘನಾ ರಾಜ್!

ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಯನ್ನು ಸಂಪರ್ಕಿಸುವ ರಹಸ್ಯ ಸುರಂಗಮಾರ್ಗ ಪತ್ತೆ

ಪಡಿತರ ಚೀಟಿದಾರರರಿಗೆ ಸಿಹಿ ಸುದ್ದಿ:  ಇ-ಕೆವೈಸಿ  ಅವಧಿ ವಿಸ್ತರಣೆ

ಜಾಮೀನಿನಲ್ಲಿ ಹೊರ ಬಂದ ಲೈಂಗಿಕ ಕಿರುಕುಳದ ಆರೋಪಿ ಸಂತ್ರಸ್ತೆಯನ್ನು ಗುಂಡಿಟ್ಟು ಕೊಂದ!

ಪಬ್ ನಲ್ಲಿ ಅಪ್ರಾಪ್ತ ಬಾಲಕಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್: ಪಬ್ ಮ್ಯಾನೇಜ್ ಮೆಂಟ್ ಗೆ ಸಂಕಷ್ಟ!

ಇತ್ತೀಚಿನ ಸುದ್ದಿ