ಕಾರನ್ನು ನೀರಿಗೆ ಹಾರಿಸಿ ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ | ಇಬ್ಬರು ನೀರುಪಾಲು - Mahanayaka

ಕಾರನ್ನು ನೀರಿಗೆ ಹಾರಿಸಿ ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ | ಇಬ್ಬರು ನೀರುಪಾಲು

chikkamagalore
26/08/2021

ಚಿಕ್ಕಮಗಳೂರು: ಕಾರನ್ನು ನೀರಿಗೆ ಹಾರಿಸಿ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ನೀರುಪಾಲಾಗಿ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಭದ್ರಾವತಿ ತಾಲೂಕಿನ ಹಳೇ ಜೆ.ಡಿ.ಕಟ್ಟೆ ನಿವಾಸಿಗಳು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ ಎಂದು ತಿಳಿದು ಬಂದಿದ್ದು, ಕಾರನ್ನೇ ನೀರಿಗೆ ಹಾರಿಸಿ ಆತ್ಮಹತ್ಯೆಗೆ ಶರಣಾಗಲು ಕುಟುಂಬ ನಿರ್ಧರಿಸಿದೆ. ಘಟನಾ ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದವರ ಪೈಕಿ ಪತಿ ಮಂಜು ಹಾಗೂ ಅತ್ತೆ ಸುನಂದಮ್ಮ ನೀರು ಪಾಲಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.  ಆತ್ಮಹತ್ಯೆಗೂ ಮೊದಲು ಮಂಜುನಾಥ್ ಅವರು ರಕ್ಷಾ ಎಂಬವರ ಜೊತೆಗೆ ಫೋನ್ ನಲ್ಲಿ ಸಂಭಾಷಣೆ ನಡೆಸಿದ್ದು, ಕುಟುಂಬ ಸಮೇತವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆನ್ನಲಾಗಿದೆ. ಈ ವಿಚಾರವನ್ನು ಅವರು ಪೊಲೀಸರಿಗೆ ಮುಟ್ಟಿಸಿದ್ದು, ಪೊಲೀಸರು ಬರುಷ್ಟರಲ್ಲಿ ಕುಟುಂಬ ನದಿಗೆ ಹಾರಿತ್ತು ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು….

ಕಾಬೂಲ್ ವಿಮಾನ ನಿಲ್ದಾಣದ ಕಡೆ ಹೋಗಬೇಡಿ | ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ಆಸ್ಟ್ರೇಲಿಯಾ

1ರಿಂದ 8ನೇ ತರಗತಿಯವರೆಗೆ ಶಾಲೆ ಆರಂಭವಾಗುವುದು ಯಾವಾಗ? | ಸುಳಿವು ನೀಡಿದ ಸಚಿವ ಬಿ.ಸಿ.ನಾಗೇಶ್

ಮೈಸೂರು: ಬೀದಿ ದೀಪಗಳಿಲ್ಲದ ಕತ್ತಲ ಪ್ರದೇಶ ಅತ್ಯಾಚಾರಿಗಳಿಗೆ ಅನುಕೂಲವಾಗುತ್ತಿದೆಯೇ? | ಸಾರ್ವಜನಿಕರು ಹೇಳುತ್ತಿರುವುದೇನು?

ಬ್ರೇಕಿಂಗ್ ನ್ಯೂಸ್:  ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರು ಶಂಕಿತ ಆರೋಪಿಗಳ ಬಂಧನ

ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಎಂದು ನಾಮಕರಣ ಮಾಡಿದರೆ, ಗಂಟಲಲ್ಲಿ ಅನ್ನ ಇಳಿಯುವುದಿಲ್ಲವೇ | ಸಿ.ಟಿ.ರವಿ ಪ್ರಶ್ನೆ

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು

ಇತ್ತೀಚಿನ ಸುದ್ದಿ