ಸುದ್ದಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ | ವರದಿಗಾರ ಸೇರಿದಂತೆ 6 ಮಂದಿ ಅರೆಸ್ಟ್ - Mahanayaka
2:59 PM Wednesday 11 - December 2024

ಸುದ್ದಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ | ವರದಿಗಾರ ಸೇರಿದಂತೆ 6 ಮಂದಿ ಅರೆಸ್ಟ್

arrested
27/08/2021

ಬೆಂಗಳೂರು:  ಖಾಸಗಿ ಕಾರ್ಖಾನೆಯ ಮಾಲಿಕರನ್ನು ಬ್ಲ್ಯಾಕ್ ಮೇಲ್ ಮಾಡಿ, ಅವರ ಇಬ್ಬರು ನೌಕರರನ್ನು ಅಪಹರಿಸಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಯೂಟ್ಯೂಬ್ ಚಾನೆಲ್ ವರದಿಗಾರ ಹಾಗೂ ರೌಡಿಶೀಟರ್ ಸೇರಿದಂತೆ 6 ಮಂದಿಯನ್ನು ಮಹಾಲಕ್ಷ್ಮೀಲೇಔಟ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

32 ವರ್ಷ ವಯಸ್ಸಿನ ಸಂತೋಷ್ ಬಂಧಿತ ಯೂಟ್ಯೂಬ್ ಚಾನೆಲ್ ವರದಿಗಾರನಾಗಿದ್ದು, ಈತನ ಜೊತೆಗೆ ಮಹಾಲಕ್ಷ್ಮಿಲೇಔಟ್ ರೌಡಿಶೀಟರ್ ರಮೇಶ್, ಹರೀಶ, ವಿವೇಕ, ದುರ್ಗೇಶ ಹಾಗೂ ಅರವಿಂದ ಬಂಧಿತ ಆರೋಪಿಗಳಾಗಿದ್ದಾರೆ.

ಇಲ್ಲಿನ ಕುರುಬರ ಹಳ್ಳಿಯಲ್ಲಿ ನಿತೀಶ್ ಎಂಬವರು ಆಹಾರ ಸಾಮಗ್ರಿ ಪೂರೈಕೆ ಮಾಡುವ ವ್ಯವಹಾರ ನಡೆಸುತ್ತಿದ್ದು, ನಾಲ್ಕು ದಿನಗಳ ಹಿಂದೆ ಅಲ್ಲಿಗೆ ಹೋಗಿದ್ದ ಸಂತೋಷ್  ಟಿವಿ ವಾಹಿನಿಯ ರಿಪೋರ್ಟರ್ ಎಂದು ಪರಿಚಯಿಸಿಕೊಂಡಿದ್ದ. ಇಲ್ಲಿ ಕಳಪೆ ಗುಣಮಟ್ಟದ ಆಹಾರ ಮಾರಾಟ ಮಾಡಲಾಗುತ್ತಿದೆ. ಇದನ್ನು ರಿಪೋರ್ಟ್ ಮಾಡುತ್ತೇನೆ. ವರದಿ ಪ್ರಸಾರ ಮಾಡಬಾರದಿದ್ದರೆ, ಹಣ ನೀಡಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಿದ್ದ ಎನ್ನಲಾಗಿದೆ. ‘

ಈ ಬಗ್ಗೆ ಹಲವು ಬಾರಿ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದ ಎನ್ನಲಾಗಿದೆ. ಇದಕ್ಕೆ  ನಿತೇಶ್ ಕ್ಯಾರೇ ಅನ್ನದಿದ್ದಾಗ ಅವರ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು  ಅಪಹರಿಸಿ, ನಿಮ್ಮ ನೌಕರರನ್ನು ಬಿಡುಗಡೆ ಮಾಡಬೇಕಾದರೆ 20 ಲಕ್ಷ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಪರಿಶಿಷ್ಟ ಜಾತಿಯ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ಆರೋಪಿ ಪಿಎಸ್ ಐ ಅರ್ಜುನ್ ಜಾಮೀನು ಅರ್ಜಿ ವಜಾ

ಗೃಹ ಸಚಿವರನ್ನು ರೇಪ್ ಮಾಡಿದ ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಮಾಡಿ | ಡಿ.ಕೆ.ಶಿವಕುಮಾರ್ ಲೇವಡಿ

ಜಾತಿಯ ಕಾರಣಕ್ಕೆ ಜನರನ್ನು ದೂರವಿಟ್ಟ ಭಾರತದಲ್ಲಿ ಕುಷ್ಠ ರೋಗಿಗಳ ಸೇವೆ ಮಾಡಿದ ಮಹಾತಾಯಿ ಮದರ್ ತೆರೆಸಾ

ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ | ಕೊನೆಗೂ ಬಯಲಾಯ್ತು ಪತಿಯ ಹೇಯ ಕೃತ್ಯ

ನಿನ್ನ ಕಾಲ್ಗುಣ ಸರಿಯಿಲ್ಲ, ನೀನು ದರಿದ್ರ… ಪತಿಯ ನಿಂದನೆಯಿಂದ ಬೇಸತ್ತು ಪತ್ನಿ ಆತ್ಮಹತ್ಯೆ | ಡೆತ್ ನೋಟ್ ನಲ್ಲಿ ಭಾವನಾತ್ಮಕ ಸಂದೇಶ

ಸರ್ಕಾರ ಮಾರಾಟದಲ್ಲಿ ನಿರತವಾಗಿದೆ, ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ | ರಾಹುಲ್ ಗಾಂಧಿ

ಇತ್ತೀಚಿನ ಸುದ್ದಿ