ಸರ್ಕಾರ ಮಾರಾಟದಲ್ಲಿ ನಿರತವಾಗಿದೆ, ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ | ರಾಹುಲ್ ಗಾಂಧಿ
ನವದೆಹಲಿ: “ನಿಮ್ಮ ಆರೋಗ್ಯದ ಬಗ್ಗೆ ನೀವೇ ಕಾಳಜಿ ವಹಿಸಬೇಕು. ಸರ್ಕಾರ ಮಾರಾಟದಲ್ಲಿ ನಿರತವಾಗಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಬೆನ್ನಲ್ಲೇ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಕಳೆದ 70 ವರ್ಷಗಳಲ್ಲಿ ಕಟ್ಟಲಾದ ದೇಶದ ಆಸ್ತಿಯನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳ ಸಂಖ್ಯೆಯು ಆತಂಕ ಮೂಡಿಸಿದೆ. ಮುಂದಿನ ಅಲೆಯಿಂದ ಭೀಕರ ಪರಿಣಾಮಗಳು ಉಂಟಾಗಬಹುದು. ಅವುಗಳಿಂದ ದೂರವಿರಬೇಕಾದರೆ, ಲಸಿಕೆ ಅಭಿಯಾನವನ್ನು ಇನ್ನಷ್ಟು ತ್ವರಿತಗೊಳಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು…
ಭಾರತಕ್ಕೆ ಬರಲು ಹಿಂದೇಟು ಹಾಕಿದ ಅಫ್ಘಾನ್ ನ ಹಿಂದೂ ಹಾಗೂ ಸಿಖ್ಖರು | ಕಾರಣ ಏನು ಗೊತ್ತಾ?
ಹಿರಿಯ ನಟ ದೊಡ್ಡಣ್ಣ ಹೃದಯ ಬಡಿತದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ ಕಾಂಗ್ರೆಸ್ ನಿಂದ ವಿವಾದಾತ್ಮಕ ಹೇಳಿಕೆ
ಕಾಬೂಲ್ ವಿಮಾನ ನಿಲ್ದಾಣದ ಕಡೆ ಹೋಗಬೇಡಿ | ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ಆಸ್ಟ್ರೇಲಿಯಾ
ಕಾರನ್ನು ನೀರಿಗೆ ಹಾರಿಸಿ ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ | ಇಬ್ಬರು ನೀರುಪಾಲು