ಭಾರತಕ್ಕೆ ಬರಲು ಹಿಂದೇಟು ಹಾಕಿದ ಅಫ್ಘಾನ್ ನ ಹಿಂದೂ ಹಾಗೂ ಸಿಖ್ಖರು | ಕಾರಣ ಏನು ಗೊತ್ತಾ?

hindu sikh
26/08/2021

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿರುವ ಹಿಂದೂ ಹಾಗೂ ಸಿಖ್ ರು ಅಲ್ಲಿಂದ ವಲಸೆ ಹೋಗಲು ನಿರ್ಧರಿಸಿದ್ದಾರೆ. ಆದರೆ ಭಾರತಕ್ಕೆ ಬರಲು ಅವರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸ್ಥಳಾಂತರ ಪ್ರಕ್ರಿಯೆಯಲ್ಲಿ ತೊಡಕುಂಟಾಗುತ್ತಿದೆ ಎಂದು ಭಾರತೀಯ ವಿಶ್ವ ವೇದಿಕೆಯ ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದಲ್ಲಿರುವ ಹಿಂದೂ ಹಾಗೂ ಸಿಖ್ ರು ನಾವು ಭಾರತಕ್ಕೆ ಹೋಗುವುದಿಲ್ಲ. ನಮ್ಮನ್ನು ಅಮೆರಿಕ ಅಥವಾ ಕೆನಡಾಕ್ಕೆ ಕಳುಹಿಸುವಂತೆ ಹೇಳುತ್ತಿದ್ದಾರೆ ಎಂದು ಹೇಳಲಾಗಿದೆ. ಕಾಬುಲ್ ನ ಗುರುದ್ವಾರ ಕರ್ತೆ ಪರ್ವಾನ್ ನಲ್ಲಿ ಆಶ್ರಯ ಪಡೆದಿರುವ ಸುಮಾರು 70ರಿಂದ 80 ಸಿಖ್ ಹಾಗೂ ಹಿಂದೂಗಳು ಭಾರತಕ್ಕೆ ಬರಲು  ಇಚ್ಚಿಸುತ್ತಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಭಾರತಕ್ಕೆ ಬರುವವರನ್ನು ಕರೆದುಕೊಂಡು ಬರುವ ಕೆಲಸಕ್ಕೆ ಕೂಡ ಹಿನ್ನೆಯಾಗಿದೆ ಎಂದು ಪುನೀತ್ ಸಿಂಗ್ ಚಾಂದೋಕ್ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನಾವು ಭಾರತಕ್ಕೆ ಬರುವುದಿಲ್ಲ.  ಭಾರತದಲ್ಲಿ ಈಗ ಉದ್ಯೋಗಾವಕಾಶಗಳೇ ಇಲ್ಲ. ಅಲ್ಲಿ ಹೋದರೆ, ಹಣೆ ಬರಹ ಏನಾಗುತ್ತದೆ ಎಂಬುವುದನ್ನು ನೋಡಿದ್ದೇವೆ.  ಅಲ್ಲಿ ಉದ್ಯೋಗಕ್ಕೆ ಅವಕಾಶವೇ ಇಲ್ಲ. ಅಲ್ಲಿಗೆ ಹೋದ ಅನೇಕರು ಅಲ್ಲಿಂದ ಬೇರೆ ದೇಶಕ್ಕೆ ಹೋಗಿದ್ದಾರೆ ಎಂದು ಅಫ್ಘಾನ್ ಸಿಖ್ ಹಾಗೂ ಹಿಂದೂಗಳು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಹಿರಿಯ ನಟ ದೊಡ್ಡಣ್ಣ ಹೃದಯ ಬಡಿತದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು]

ಕಾರನ್ನು ನೀರಿಗೆ ಹಾರಿಸಿ ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ | ಇಬ್ಬರು ನೀರುಪಾಲು

ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ ಕಾಂಗ್ರೆಸ್ ನಿಂದ ವಿವಾದಾತ್ಮಕ ಹೇಳಿಕೆ

ಕಾಬೂಲ್ ವಿಮಾನ ನಿಲ್ದಾಣದ ಕಡೆ ಹೋಗಬೇಡಿ | ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ಆಸ್ಟ್ರೇಲಿಯಾ

ಮೈಸೂರು: ಬೀದಿ ದೀಪಗಳಿಲ್ಲದ ಕತ್ತಲ ಪ್ರದೇಶ ಅತ್ಯಾಚಾರಿಗಳಿಗೆ ಅನುಕೂಲವಾಗುತ್ತಿದೆಯೇ? | ಸಾರ್ವಜನಿಕರು ಹೇಳುತ್ತಿರುವುದೇನು?

ಕ್ಯಾನ್ಸರ್ ಪೀಡಿತ ಮುಸ್ಲಿಮ್ ಮಹಿಳೆಯರಿಗೆ ನೀಡಲಾಗುವ ಸಹಾಯಧನ ಯೋಜನೆ ಹಿಂಪಡೆಯಬೇಕು, ಎಲ್ಲರಿಗೂ ಯೋಜನೆ ಜಾರಿಗೆ ತನ್ನಿ | ಯತ್ನಾಳ್ ಒತ್ತಾಯ

ಇತ್ತೀಚಿನ ಸುದ್ದಿ

Exit mobile version